Wednesday, July 29, 2026

BDA Apartments

Home Front Page  ಜನರ ಕಷ್ಟಗಳಿಗೆ ನಮ್ಮ ಮೈತ್ರಿ ಸರ್ಕಾರ ಸ್ಪಂದಿಸಿದೆ- ಇಂದು ವಿಶ್ವಾಸಮತಯಾಚನೆ ಬಗ್ಗೆ ಸಚಿವ ಯುಟಿ ಖಾದರ್...

 ಜನರ ಕಷ್ಟಗಳಿಗೆ ನಮ್ಮ ಮೈತ್ರಿ ಸರ್ಕಾರ ಸ್ಪಂದಿಸಿದೆ- ಇಂದು ವಿಶ್ವಾಸಮತಯಾಚನೆ ಬಗ್ಗೆ ಸಚಿವ ಯುಟಿ ಖಾದರ್ ಮಾತನಾಡಿದ್ದು ಹೀಗೆ..?

ಬೆಂಗಳೂರು,ಜು,23,2019(www.justkannada.in):  ನಮ್ಮ ಮೈತ್ರಿ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದೆ ಎಂದು ಸಚಿವ ಯುಟಿ ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಸಭೆ ಕಲಾಪದಲ್ಲಿ ಇಂದು ಮಾತನಾಡಿದ ಸಚಿವ ಯುಟಿ ಖಾದರ್,  ನಮ್ಮ ಸರ್ಕಾರ ಕೊಡಗು ನಿರಾಶ್ರಿತರಿಗೆ ಮನೆಗಳನ್ನ ನಿರ್ಮಿಸಿಕೊಟ್ಟಿದೆ. ಪ್ರತಿ ತಿಂಗಳು ಅವರಿಗೆ 10 ಸಾವಿರ ನೀಡುತ್ತಿದ್ದೇವೆ.  ಪೊಲೀಸ್ ಇಲಾಖೆಯ ಸಿಬ್ಬಂದಿಯ ಸಮಸ್ಯೆಗೆ ಸ್ಪಂದಿಸಿ ಔರದ್ಕರ್ ವರದಿ ಜಾರಿ ಮಾಡಿದ್ದೇವೆ ನನ್ನ ಇಲಾಖೆಯಲ್ಲೂ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಸರ್ಕಾರದ ಸಾಧನೆ ಬಗ್ಗೆ ಮಾಹಿತಿ ನೀಡಿದರು.

ಹಾಗೆಯೇ ರಾಜ್ಯದ ಜನತೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಎಲ್ಲಾ ವರ್ಗದ ಜನರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎಂದು ಸಚಿವ ಯುಟಿ ಖಾದರ್ ಹೇಳಿದರು. ಹಾಗೆಯೇ ಇಂದು ಸಂಜೆ 6 ಗಂಟೆಗೆ ವಿಶ್ವಾಸಮತಕ್ಕೆ ಸಮಯ ನೀಡಿದ್ದೀರಿ. ಆ ಸಮಯದಲ್ಲಿ ವಿಶ್ವಾಸಮತಯಾಚನೆ ನಡೆಯುತ್ತದೆ ಎಂದು ಹೇಳಿದರು.

Key words: Our- alliance government 0 responded – people-Minister UT Khader