Saturday, August 8, 2026

BDA Apartments

Home Front Page ನಮ್ಮ ಸಾಧನೆಗಳು ಹಾಳೆಗಳಿಗೆ ಸೀಮಿತವಾಗಿರದೆ ಜನರ ಬದುಕಲ್ಲಿ ಪ್ರತಿಫಲಿಸುತ್ತಿವೆ- ಸಿಎಂ ಸಿದ್ದರಾಮಯ್ಯ.

ನಮ್ಮ ಸಾಧನೆಗಳು ಹಾಳೆಗಳಿಗೆ ಸೀಮಿತವಾಗಿರದೆ ಜನರ ಬದುಕಲ್ಲಿ ಪ್ರತಿಫಲಿಸುತ್ತಿವೆ- ಸಿಎಂ ಸಿದ್ದರಾಮಯ್ಯ.

ಬೆಂಗಳೂರು,ಡಿಸೆಂಬರ್,9,2023(www.justkannada.in): ನಮ್ಮ ಸಾಧನೆಗಳು ಸದನದ ಒಳಗೆ ಮತ್ತು ಹೊರಗೆ ಹಾಳೆಗಳಿಗೆ ಸೀಮಿತವಾಗಿರದೆ ಜನರ ಬದುಕಲ್ಲಿ ಪ್ರತಿಫಲಿಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದ 143 ಕಾರ್ಯಕ್ರಮಗಳಲ್ಲಿ 83ಕ್ಕೆ ಆದೇಶ ಹೊರಡಿಸಿ, ಜಾರಿಗೊಳಿಸಲಾಗುತ್ತಿದೆ. 4 ಗ್ಯಾರಂಟಿ ಯೋಜನೆಗಳು ಈಗಾಗಲೇ ಜಾರಿಯಾಗಿವೆ, ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ ಎಂದಿದ್ದಾರೆ.

ನಮ್ಮ ಆಡಳಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸೀಮಿತವಾಗದೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ಕೊಟ್ಟು ಕರ್ನಾಟಕ ಅಭಿವೃದ್ಧಿ ಮಾದರಿ ಆಡಳಿತವೆಂಬ ನವ ಕಲ್ಪನೆಗೆ ನಾಂದಿಯಾಗಿದ್ದೇವೆ. ನಮ್ಮ ಸಾಧನೆಗಳು ಸದನದ ಒಳಗೆ ಮತ್ತು ಹೊರಗೆ ಹಾಳೆಗಳಿಗೆ ಸೀಮಿತವಾಗಿರದೆ ಜನರ ಬದುಕಲ್ಲಿ ಪ್ರತಿಫಲಿಸುತ್ತಿವೆ ಎಂದು ಟ್ವೀಟ್ ಮಾಡಿದ್ದಾರೆ.

Key words: Our achievements – not limited -sheets – reflected – people- CM Siddaramaiah.