ಇಂದಿರಾ ಕ್ಯಾಂಟೀನ್ ತನಿಖೆಗೆ ಆದೇಶ

ಬೆಂಗಳೂರು:ಆ-25: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕಾರಯುಕ್ತ ಸಮಿತಿಯಿಂದ ಕೈಗೊಳ್ಳಲಾದ ಕಾಮಗಾರಿ ಮತ್ತು ಇಂದಿರಾ ಕ್ಯಾಂಟೀನ್ ಲೋಪದೋಷಗಳ ಸಮಗ್ರ ತನಿಖೆಗೆ ಸರ್ಕಾರ ಆದೇಶಿದೆ.

ಹಿಂದಿನ ಸರ್ಕಾರದ ಅಧಿಕಾರವಧಿಯಲ್ಲಿ ನಗರೋತ್ಥಾನ ಅನುದಾನದಡಿ ಅಧಿಕಾರಯುಕ್ತ ಸಮಿತಿಯಿಂದ 5,300 ಕೋಟಿ ರೂ.ಗಳ ಕಾಮಗಾರಿಗಳನ್ನು ಹಮ್ಮಿಕೊಳ್ಳಾಗಿತ್ತು. ಗುತ್ತಿಗೆದಾರರು ನಮೂದಿಸಿದ್ದ ಸರಾಸರಿ ಶೇ.34 ಅಧಿಕ ಮೊತ್ತವನ್ನು ಪರಾಮರ್ಶೆ ನಡೆಸದೆ ಅನುಮೋದನೆ ನೀಡಿರುವುದರ ಹಿಂದೆ ಅವ್ಯವಹಾರ ನಡೆದಿದೆ ಎನ್ನಲಾಗಿತ್ತು.

ಪಾಲಿಕೆ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಟೀನ್​ಗಳು ಮತ್ತು 15 ಮೊಬೈಲ್ ಕ್ಯಾಂಟೀನ್​ಗಳಲ್ಲಿ ಪ್ರತಿ ತಿಂಗಳು 62,70 ಲಕ್ಷ ಮಂದಿ ಊಟ ಮಾಡುತ್ತಿದ್ದಾರೆ ಎಂಬ ನಕಲಿ ಬಿಲ್ ಸೃಷ್ಟಿಸಿ ಪ್ರತಿ ತಿಂಗಳು ಬೃಹತ್ ಪ್ರಮಾಣದ ಸಬ್ಸಿಡಿಯನ್ನು ಪಡೆದು ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎಂದು ಆರೋಪಗಳು ಕೇಳಿ ಬಂದಿದ್ದವು.

ಈ ಹಿನ್ನೆಲೆ 2016ರ ನ.3ರಿಂದ 2019ರ ಜೂ.30ರವರೆಗೆ ಅಧಿಕಾರಯುಕ್ತ ಸಮಿತಿಯು ಅನುಮೋದನೆ ನೀಡಿರುವ ಕಾಮಗಾರಿಗಳ ಬಗ್ಗೆ ಮತ್ತು ಇಂದಿರಾ ಕ್ಯಾಂಟೀನ್ ಲೋಪಗಳನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಕೃಪೆ:ವಿಜಯವಾಣಿ

ಇಂದಿರಾ ಕ್ಯಾಂಟೀನ್ ತನಿಖೆಗೆ ಆದೇಶ
ordered-for-probe-the-indira-canteen