ಹುಣಸೂರು ಹೊಸ ಜಿಲ್ಲೆ ಮಾಡಲು ವಿರೋಧ: ‘ಹಳ್ಳಿಹಕ್ಕಿ’ ವಿರುದ್ದ ಕಿಡಿಕಾರಿದ ಮಾಜಿ ಸಚಿವ ಸಾ.ರಾ ಮಹೇಶ್…

ಮೈಸೂರು,ಅ,14,2019(www.justkannada.in):   ಮೈಸೂರು ಜಿಲ್ಲೆ ವಿಭಾಗಿಸಿ ಹುಣಸೂರು ಹೊಸ ಜಿಲ್ಲೆ ಮಾಡುವಂತೆ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಮನವಿ ಮಾಡಿರುವ ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಚಿವ ಸಾ.ರಾ ಮಹೇಶ್ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಸಾ.ರಾ ಮಹೇಶ್,   ಸಿಎಂ ಬಿಎಸ್ ವೈರನ್ನ ಇಕ್ಕಟ್ಟಿಗೆ ಸಿಲುಕಿಸಲು ಹೆಚ್.ವಿಶ್ವನಾಥ್ ಈ ರೀತಿ ಹೇಳಿಕೆ ನೀಡಿದ್ದಾರೆ. ಚುನಾವಣೆಗಾಗಿ ಈ ರೀತಿ ಮನವಿ ಸಲ್ಲಿಸಿದ್ದಾರೆ. ಮುಂಬೈಗೆ ಹೋಗಿದ್ದಾಗ ಹುಣಸೂರು ಪ್ರತ್ಯೇಕ ಜಿಲ್ಲೆ ಬಗ್ಗೆ ನೆನಪಿಗೆ ಬರಲಿಲ್ವಾ ಎಂದು ಟಾಂಗ್ ನೀಡಿದರು.

ಹೊಸ ಜಿಲ್ಲೆ ಮಾಡಿದ್ರೆ  ಆಗುವ ಸಮಸ್ಯೆಗಳ ಬಗ್ಗೆ  ಚರ್ಚಿಸಬೇಕು. 14 ತಿಂಗಳುಗಳ ಕಾಲ ಶಾಸಕರಾಗಿದ್ದಾಗ ಈ ಬಗ್ಗೆ ಧ್ವನಿ ಎತ್ತಲಿಲ್ಲ. ಈಗ ಹೆಚ್. ವಿಶ್ವನಾಥ್ ಅವರು ರಾಜಕೀಯ ಗಿಮಿಕ್​ಗಾಗಿ ಈ ರೀತಿ ಮಾಡಿದ್ದಾರೆ. ಹುಣಸೂರನ್ನು ಕೇಂದ್ರವನ್ನಾಗಿಟ್ಟುಕೊಂಡು ಹೊಸ ಜಿಲ್ಲೆ ಮಾಡುವ ಪ್ರಸ್ತಾವ ಮುಂದಿಟ್ಟರೆ ಚುನಾವಣೆ ಗೆಲ್ಲಬಹುದು ಎಂಬುದು ಅವರ ಫ್ಲ್ಯಾನ್ ಆಗಿದೆ ಎಂದು ಸಾ.ರಾ ಮಹೇಶ್  ಲೇವಡಿ ಮಾಡಿದರು.

Key words: Opposition – new district – Hunsur- Former Minister –sa.ra Mahesh-H.Vishwanath