Wednesday, August 5, 2026

BDA Apartments

Home Front Page ಗುತ್ತಿಗೆದಾರರಿಂದ ವಿಪಕ್ಷ ಬಿಜೆಪಿ ನಾಯಕರ ಭೇಟಿ: ಡಿಸಿಎಂ ಡಿ.ಕೆ ಶಿವಕುಮಾರ್ ಗರಂ.

ಗುತ್ತಿಗೆದಾರರಿಂದ ವಿಪಕ್ಷ ಬಿಜೆಪಿ ನಾಯಕರ ಭೇಟಿ: ಡಿಸಿಎಂ ಡಿ.ಕೆ ಶಿವಕುಮಾರ್ ಗರಂ.

ಬೆಂಗಳೂರು,ಆಗಸ್ಟ್,10,2023(www.justkannada.in): ತಮ್ಮ ವಿರುದ್ಧ  ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರು ವಿಪಕ್ಷ ಬಿಜೆಪಿ ನಾಯಕರನ್ನ ಭೇಟಿಯಾದ ವಿಚಾರ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಗುತ್ತಿಗೆದಾರರ ಸಂಘದ ಅಧ್ಯಕ್ಷ  ಕೆಂಪಣ್ಣ ದೂರು ಕೊಟ್ಟಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕು.  ಪ್ರಚಾರಕ್ಕೆ ಯಾರು ಬೇಕಾದರೂ ಹೋಗಲಿ.  ದೆಹಲಿಗೆ ಬರುವಂತೆ ಯಾರು ಕರೆಯುತ್ತಿದ್ದಾರೆ ಅಂತಾ ಗೊ‍ತ್ತಿದೆ.   ದೆಹಲಿಗೆ ಬಂದು ಸ್ಟೇಟ್ ಮೆಂಟ್ ಕೊಡಿ ಅಂತಾ ಕರೆಯುತ್ತಿದ್ದಾರೆ. ಅವರು ಮಾಡಿರುವ ಕಾಮಗಾರ ಪ್ರೂವ್ ಮಾಡಲಿ. ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್ ಬಾಕಿ ಬಿಲ್ ಪಾವತಿಗೆ ಕಮಿಷನ್ ಕೇಳಿದ್ದಾರೆಂದು ಗುತ್ತಿಗೆದಾರರು ಆರೋಪ ಮಾಡಿದ್ದು ಈ ಸಂಬಂಧ  ಗುತ್ತಿಗೆದಾರರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಶಾಸಕರನ್ನ ಭೇಟಿಯಾಗಿ ಹೋರಾಟಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದರು.

Key words: Opposition -BJP leaders- met –contractors-DCM -DK Shivakumar