Tuesday, September 22, 2026

BDA Apartments

ಕಿರಿಕ್ ಬೆಡಗಿ ರಶ್ಮಿಕಾ ಮಂದಣ‍್ಣ ಈಗ ನ್ಯಾಷನಲ್ ಕ್ರಷ್ ! BDA JK_Adv BDA Adv
Home Front Page ಮೈತ್ರಿಗೆ ವಿರೋಧ: ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಸಿ.ಟಿ ರವಿ ಅಸಮಾಧಾನ.

ಮೈತ್ರಿಗೆ ವಿರೋಧ: ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಸಿ.ಟಿ ರವಿ ಅಸಮಾಧಾನ.

ಚಿಕ್ಕಮಗಳೂರು,ಅಕ್ಟೋಬರ್,6,2023(www.justkannada.in):  ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಮಾಜಿಸಚಿವ ಸಿ.ಟಿ ರವಿ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ಸಿ.ಟಿ ರವಿ, ಶಾಸಕ ಎಸ್.​ಟಿ ಸೋಮಶೇಖರ್ ಅವರ ಅಸಮಾಧಾನಕ್ಕೆ ಹಲವು ಕಾರಣಗಳಿವೆ. ಇದರ ಬಗ್ಗೆ ಚರ್ಚೆ ಇವಾಗ ಮಾಡುವುದಿಲ್ಲ.  ನಿಷ್ಠೆ ಎಂಬುವುದು ಸನ್ನಿವೇಶದ ಅವಶ್ಯಕತೆ ಅಲ್ಲ ಜೀವನದ ಜೀವಾಳವಾಗಿರಬೇಕು. ಸನ್ನಿವೇಶಕ್ಕೆ ತಕ್ಕಂತೆ ನಿಷ್ಠೆ ಬದಲಾಗುವಂತದ್ದು ಕೆಲವರಿಗೆ ಇರುತ್ತೆ. ಯಾವ ಸಂದರ್ಭದಲ್ಲಿ ಏನೇನು ಎಂಬುದನ್ನ ಅವರ ವ್ಯಕ್ತಿತ್ವ ತೋರುತ್ತೆ. ಎಸ್ ​ಟಿ ಸೋಮಶೇಖರ್ ಅವರ ಬಗ್ಗೆ ಈಗೇನು ಹೇಳಲು ಬಯಸುವುದಿಲ್ಲ. ಸಂದರ್ಭ ಬಂದಾಗ ಹೇಳುತ್ತೇನೆ ಎಂದು ತಿಳಿಸಿದರು.ಮೈತ್ರಿಗೆ ವಿರೋಧ: ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಸಿ.ಟಿ ರವಿ ಅಸಮಾಧಾನ ct ravi
ಮೈತ್ರಿ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಮೈತ್ರಿ ಕುರಿತು ಕೆಲವರನ್ನ ಭಿನ್ನಾಭಿಪ್ರಾಯ ಸ್ವಾಭಾವಿಕ. ಭಿನ್ನಾಭಿಪ್ರಾಯವನ್ನ ಸರಿಪಡಿಸುವ ಕೆಲಸವನ್ನ ನಮ್ಮ ನಾಯಕರು ಮಾಡುತ್ತಾರೆ ಎಂದು ಸಿ.ಟಿ ರವಿ ತಿಳಿಸಿದರು.

Key words: Opposition – alliance- CT Ravi – MLA -ST Somashekhar.