ವಿಪಕ್ಷಗಳ ಮಾತು ಕೇಳಿ ನೈಟ್ ಕರ್ಫ್ಯೂ ವಾಪಸ್- ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

ಬೆಂಗಳೂರು,ಡಿಸೆಂಬರ್,31,2020(www.justkannada.in): ನೈಟ್ ಕರ್ಫೂ ಬಗ್ಗೆ ಯಾವುದೇ ಗೊಂದಲ ಇಲ್ಲ. ವಿಪಕ್ಷಗಳ ಮಾತು ಕೇಳಿ ನೈಟ್ ಕರ್ಫ್ಯೂ ವಾಪಸ್ ಪಡೆದಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.jk-logo-justkannada-mysore

ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ನೈಟ್ ಕರ್ಫ್ಯೂ ಸಿಎಂ ವಿವೇಚನೆ ಅಲ್ಲ. ನೈಟ್ ಕರ್ಫ್ಯೂ ಹೇರಬೇಕು ಅಂತ ಅಭಿಪ್ರಾಯಪಟ್ಟಿದ್ದೆ.  ತಾಂತ್ರಿಕ ಸಲಹಾ ಸಮಿತಿಯೂ ನೈಟ್ ಕರ್ಫ್ಯೂ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತ್ತು. ವಿಪಕ್ಷಗಳು ನೈಟ್ ಕರ್ಫ್ಯೂ ಬೇಡ ಎಂದ ಹಿನ್ನೆಲೆ ವಾಪಸ್ ಪಡೆದಿದ್ದೇವೆ ಎಂದು ತಿಳಿಸಿದರು.opposite-party-return-night-curfew-minister-dr-k-sudhakar

ನೈಟ್ ಕರ್ಫ್ಯೂನಿಂದ ಹಲವರಿಗೆ ತೊಂದರೆಯಾಗುವ ಕಾರಣಕ್ಕೆ ವಾಪಸ್ ಪಡೆಯಲಾಗಿದೆ. ಇದು ನನ್ನ ವ್ಯಾಪ್ತಿಗೆ ಬರಲ್ಲ. ನಾನು ಗೃಹ ಸಚಿವರಿಗೆ ಸಲಹೆ ನೀಡಿದ್ಧೆ. ಗೃಹ ಸಚಿವರು ಹಿರಿಯರಿದ್ದಾರೆ. ಅವರಿಗೆ ಅನುಭವವಿದೆ. ಅವರ ಅನುಭವದಿಂದಲೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು.

ENGLISH SUMMARY….

Night curfew has been withdrawn yielding to opposition pressure: Health Minister Dr. K. Sudhakar
Bengaluru, Dec. 31, 2020 (www.justkannada.in): “We didn’t have any confusion on imposing night curfew. It was withdrawn because of the pressure by opposition parties,” said Health and Medical Education Minister Dr. K. Sudhakar.opposite-party-return-night-curfew-minister-dr-k-sudhakar
Speaking to the presspersons in Bengaluru today Minister K. Sudhakar expressed his view that the decision of imposing night curfew was not by Chief Minister B.S. Yedyurappa. “I had demanded it. Even the technical committee had also demanded it. We have withdrawn it because of the pressure from opposition parties. We have withdrawn it considering that it will cause trouble to many. However, it doesn’t come to my authority. I had suggested the Home Minister, but he hesitated. He has more experience and he has taken this decision based on his experience,” he explained.
Keywords: Minister Dr. K. Sudhakar/ night curfew/ new year celebrations

Key words: opposite party- Return – Night Curfew-Minister – Dr. K. Sudhakar.