‘’ನೂತನ ಗ್ರಾಪಂ ಸದಸ್ಯರುಗಳಿಗೆ ಜನವರಿ 19ರಿಂದ ಸಾಮರ್ಥ್ಯಾಭೀವೃದ್ಧಿ  ತರಬೇತಿ’’ : ಸಚಿವ ಕೆ.ಎಸ್.ಈಶ್ವರಪ್ಪ…!

ಬೆಂಗಳೂರು,ಡಿಸೆಂಬರ್,31,2020(www.justkannada.in) : ನೂತನವಾಗಿ ಆಯ್ಕೆಯಾಗಿರುವ ಗ್ರಾಪಂ ಸದಸ್ಯರುಗಳಿಗೆ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಇಲಾಖೆಯ ಅಂಗ ಸಂಸ್ಥೆಯಾದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಸಾಮರ್ಥ್ಯಾಭೀವೃದ್ಧಿ  ತರಬೇತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.members-new-GRAPM-January-Since 19-Effective- Training-Training-Minister-K.S.Eshwarappa ...!

ತರಬೇತಿಯು ಜನವರಿ 19 ರಿಂದ ಮಾರ್ಚ್ 26 ವರೆಗೆ ಆಯೋಜಿಸಲು ಉದ್ದೇಶಿಸಲಾಗಿದೆ. ರಾಜ್ಯದ 5,762 ಗ್ರಾಮ ಪಂಚಾಯತಿಗಳ 92,131 ಸದಸ್ಯರುಗಳಿಗೆ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.members-new-GRAPM-January-Since 19-Effective- Training-Training-Minister-K.S.Eshwarappa ...!

285 ತರಬೇತಿ ಕೇಂದ್ರಗಳ ಮುಖೇನ ತಾಲೂಕು ಹಂತದಲ್ಲಿ ಹತ್ತು ತಂಡಗಳಲ್ಲಿ ತರಬೇತಿ ನೀಡುತ್ತಿದ್ದು, ಇದಕ್ಕಾಗಿ 900 ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

key words : members-new-GRAPM-January-Since 19-Effective- Training-Training-Minister-K.S.Eshwarappa …!