ಅಪರೇಷನ್ ಸಿಂಧೂರಕ್ಕೆ ಬೆದರಿದ ಪಾಕ್: ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ ಎಂದ ಪಾಕ್ ರಕ್ಷಣಾ ಸಚಿವ

ನವದೆಹಲಿ,ಮೇ,7,2025 (www.justkannada.in):  ಪೆಹಲ್ಗಾಮ್​ ಉಗ್ರರ ದಾಳಿಯ ಪ್ರತೀಕಾರಕ್ಕೆ  ನಿನ್ನೆ ತಡರಾತ್ರಿ ಭಾರತೀಯ ಸೇನೆ ಉಗ್ರರ 9 ನೆಲೆಗಳ ಮೇಲೆ ದಾಳಿ ಕ್ಷಿಪಣಿ ದಾಳಿ ನಡೆಸಿ   ಉಗ್ರರ ನೆಲೆಯನ್ನ ಧ್ವಂಸ ಮಾಡಿದ್ದು, ಈ ಅಪರೇಷನ್ ಸಿಂಧೂರಕ್ಕೆ  ಬೆದರಿದ ಪಾಕಿಸ್ತಾನ ಇದೀಗ ಶಾಂತಿ ಮಂತ್ರ ಜಪಿಸಿದಂತಿದೆ.

ಹೌದು  ಆಪರೇಷನ್ ಸಿಂಧೂರ್ ​​ ಬೆನ್ನಲ್ಲೇ ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ ಶಾಂತಿ ಪಠಣ ಮಾಡಿದ್ದಾರೆ ಎಂದು ವರದಿಯಾಗಿದೆ.

ಅಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೆ ಪ್ರತಿಕ್ರಿಯಿಸಿರುವ  ಪಾಕಿಸ್ತಾನ ರಕ್ಷಣಾ ಸಚಿವ ಅಸಿಫ್​ ಭಾರತ ದಾಳಿ ಮಾಡಿದರೆ ಮಾತ್ರ ಪಾಕಿಸ್ತಾನ ಪ್ರತಿಕ್ರಿಯೆ ನೀಡುತ್ತದೆ . ನಾವು ಭಾರತದ ವಿರುದ್ಧ ಯಾವುದೇ ಕ್ರಮಕೈಗೊಳ್ಳುವಿದಲ್ಲ ಎಂದು ಹೇಳುತ್ತಿದ್ದೇವೆ. ಆದರೆ ನಮ್ಮ ಮೇಲೆ ದಾಳಿ ನಡೆದರೆ, ನಾವು ಪ್ರತಿದಾಳಿ ಮಾಡುತ್ತೇವೆ. ಇನ್ನು ಒಂದು ವೇಳೆ ಭಾರತ ಹಿಂದೆ ಸರಿದರೆ ನಾವು ಸಹ ಖಂಡಿತವಾಗಿಯೂ ಈ ಉದ್ವಿಗ್ಬತೆಯನ್ನು ಶಮನಗೊಳಿಸುತ್ತೇವೆ. ಭಾರತ ದಾಳಿ ನಿಲ್ಲಿಸಿದರೆ ಉದ್ವಿಗ್ನತೆ ಶಮನಕ್ಕೆ ಸಿದ್ಧರಿದ್ದೇವೆ ಎಂದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ದೇಶದಾದ್ಯಂತ  ಮಾಕ್ ಡ್ರಿಲ್ (ಅಣಕುಪ್ರದರ್ಶನ ) ನಡೆಯುತ್ತಿದ್ದು ಈ ಪ್ರಯುಕ್ತ ಯುದ್ಧದ ಸೈರನ್ ಮೊಳಗಿತು. ಏನಾದರು ಪಾಕಿಸ್ತಾನ್ ಭಾರತದ ಮೇಲೆ ದಾಳಿ ಮಾಡಿದರೆ ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಕುರಿತು ಅಣುಕು ಪ್ರದರ್ಶನ  ಇದಾಗಿದೆ.

Key words: Operation Sindhura, Pakistan, threatened