ಅಪರೇಷನ್ ಸಿಂಧೂರ ಯಶಸ್ವಿ: ನಮ್ಮ ಹೋರಾಟ ಉಗ್ರರೊಂದಿಗೆ ಮಾತ್ರ , ಪಾಕ್ ಸೇನೆಯೊಂದಿಗೆ ಅಲ್ಲ- ಮೂರು ಸೇನಾ ಮುಖ್ಯಸ್ಥರಿಂದ ಮಾಹಿತಿ  

ನವದೆಹಲಿ,ಮೇ,12,2025 (www.justkannada.in): ಉಗ್ರರೊಂದಿಗೆ ಉಗ್ರವಾದದ ವಿರುದ್ದ  ಮಾತ್ರ ನಮ್ಮ ಹೋರಾಟ ,ಪಾಕ್ ಸೇನೆಯೊಂದಿಗೆ ಅಲ್ಲ. ನಾವು ನಡೆಸಿದ ಅಪರೇಷನ್ ಸಿಂಧೂರ ಯಶಸ್ವಿಯಾಗಿದೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಡಿಜಿಎಂಒ ಲೆಫ್ಟಿನಂಟ್ ಜನರಲ್ ರಾಜೀವ್ ಘಾಯ್,  ಏರ್ ಮಾರ್ಷಲ್ ಎ.ಕೆ. ಭಾರ್ತಿ, ವೈಸ್ ಅಡ್ಮರಲ್  ಎಎನ್ ಪ್ರಮೋದ್ ಮೂರು ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಪರೇಷನ್ ಸಿಂಧೂರ ಬಗ್ಗೆ ವಿವರಿಸಿದರು.

ಈ ಕುರಿತು ಮಾಹಿತಿ ನೀಡಿದ  ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್,  ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕರ ಸ್ವರೂಪ ಬದಲಾಗಿದೆ. ಭಾರತದ ಹೋರಾಟ ಭಯೋತ್ಪಾದಕರ ವಿರುದ್ಧ, ಅವರ ಸೋಲಿಗೆ ಪಾಕಿಸ್ತಾನವೇ ಕಾರಣ. ನಾವು ಪಾಕ್ ಡ್ರೋಣ್ ಗಳನ್ನ ತಂತ್ರಜ್ಞಾನ ಬಳಸಿ ಹೊಡೆದಿದ್ದೇವೆ. ನೌಕಾದಳ ಎಲ್ಲಾ ರೀತಿಯ ಕಟ್ಟೆಚ್ಚರ ವಹಿಸಿದ್ದು ಪಾಕ್ ನೌಕಾದಳಕ್ಕೆ ಅವಕಾಶ ಕೊಟ್ಟಿಲ್ಲ. ಗಡಿ ಬಳಿ ಬರಲು ಅವಕಾಶ ನೀಡಿಲ್ಲ . ಪಾಕ್  ಉಗ್ರರ ಪಾಪದ ಕೊಡ ತುಂಬಿದೆ. ನಮ್ಮ ಮೇಳೆ ದಾಳಿ ಮಾಡಲು ಪಾಕ್ ಗೆ ಸಾಧ್ಯವಾಗಿಲ್ಲ ಪಾಕ್ ದಾಳಿಯನ್ನ ವಿಫಲಗೊಳಿದ್ದೇವೆ.  ಪಾಕ್ ನ ದಾಳಿ ಪ್ರಯತ್ನ ವಿಫಲ ಎಂದರು.

ಏರ್ ಮಾರ್ಷಲ್ ಎ.ಕೆ. ಭಾರ್ತಿ ಮಾತನಾಡಿ,  ನಮ್ಮ ಹೋರಾಟ ಭಯೋತ್ಪಾದಕರು ಮತ್ತು ಅವರ ಬೆಂಬಲಿತ ಮೂಲಸೌಕರ್ಯದೊಂದಿಗೆ ಹೊರತು ಪಾಕಿಸ್ತಾನ ಸೇನೆಯೊಂದಿಗೆ ಅಲ್ಲ ಎಂದು ನಾವು ಪುನರುಚ್ಚರಿಸಿದ್ದೇವೆ. ಆದರೆ, ಪಾಕಿಸ್ತಾನ ಸೇನೆಯು ಮಧ್ಯಪ್ರವೇಶಿಸಿ ಭಯೋತ್ಪಾದಕರ ಪರವಾಗಿ ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದ್ದು ವಿಷಾದಕರ, ಗಮನಾರ್ಹವಾಗಿ, ಆಪರೇಷನ್ ಸಿಂಧೂರ ಭಾಗವಾಗಿ ಭಾರತ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿತು. ನಮ್ಮ ಯುದ್ಧ-ಸಾಬೀತಾದ ವ್ಯವಸ್ಥೆಗಳು ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ ಮತ್ತು ಅವುಗಳನ್ನು ಎದುರಿಸುತ್ತಿವೆ” ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಹೇಳಿದರು.

ನಮ್ಮ ಸೆನಾ ನೆಲ ಜನರನ್ನ ಗುರಿಯಾಗಿಸಿ ಪಾಕ್ ದಾಳಿ ಮಾಡಿದೆ. ನಮ್ಮ ತಡೆಗೋಡೆ ಭೇದಿಸಲು ಪಾಕ್ ವಿಫಲವಾಗಿದೆ.  ಪಾಕ್ ಮತ್ತೆ ದಾಳಿ ಮಾಡಿದ್ರೆ ತಕ್ಕ ಪಾಠ. ಉಗ್ರರ ವಿರುದ್ದ ಭಾರತೀಯ .  ಪಾಕ್ ಮತ್ತೆ ದಾಳಿ ಮಾಡಿದ್ರೆ ತಕ್ಕ ಪಾಠ. ಉಗ್ರರ ವಿರುದ್ದ ಭಾರತೀಯ ಸೇನೆ ಹೋರಾಟ ಮಾಡಿದೆ. ಪಾಕ್ ಉಗ್ರರ ಪರ ನಿಂತಿತ್ತು. ಈಗ ಪರಿಣಾಮ ಅನುಭವಿಸಿದೆ.  ಎಂದರು.

ಅಪರೇಷನ್ ಸಿಂಧೂರ ಯಶಸ್ವಿಯಾಗಿದ್ದು,  ಪಾಕ್ 11 ವಾಯು ನೆಲೆಗಳನ್ನ ನಾಶ ಮಾಡಿದ್ದೇವೆ.  ಯಾವುದೇ ಸಮಯದಲ್ಲೂ ದಾಳಿ ಎದುರಿಸಲು ಸಿದ್ದರಿದ್ದೇವೆ. ಪಾಕಿಸ್ತಾನ ಮತ್ತೆ ಕೆಣಕಿದರೆ ಸುಮ್ಮನೆ ಕೂರಲ್ಲ. ಭಾರತೀಯ ಏರ್ ಡಿಫೆನ್ಸ್ ಗೋಡೆಯಂತೆ ಕಾಪಾಡಿದೆ.  ಸ್ವದೇಶಿ ನಿರ್ಮಿತ ಕ್ಷಿಪಣಿಯಿಂದ ಚೈನಾ ಕ್ಷಿಪಣಿ ಧ್ವಂಸ ಮಾಡಲಾಗಿದೆ ಎಂದು ಡಿಜಿಎಂಒ ರಾಜೀವ್ ಘಾಯ್ ತಿಳಿಸಿದರು.

ಹಾಗೆಯೇ ಪಾಕ್ ಸುಳ್ಳು ಪ್ರಚಾರ ನಿರೀಕ್ಷಿತ. ಅಪರೇಷನ್ ಸಿಂಧೂರದ ತಾಂತ್ರಿಕ ವಿಷಯಗಳನ್ನ ಹೇಳಲು ಆಗಲ್ಲ.  ನಮ್ಮ ಕೆಲಸ ನಾವು ಮುಗಿಸಿದ್ದೇವೆ.  ನಮ್ಮ ಹೋರಾಟ ಉಗ್ರರು ಮತ್ತು ಉಗ್ರವಾದದ ವಿರುದ್ದ ಪಾಕಿಸ್ತಾನದಲ್ಲಾದ ನಷ್ಟಕ್ಕೆ ಪಾಕ್ ಸೇನೆಯೇ ಕಾರಣ ಎಂದು ಮೂವರು ಸೇನಾಧಿಕಾರಿಗಳು ತಿಳಿಸಿದರು.

Key words: Operation Sindhur ,successful, Our, three army, chiefs