ನವದೆಹಲಿ,ಮೇ,7,2025 (www.justkannada.in): ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಅಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ನೂರಕ್ಕೂ ಹೆಚ್ಚು ಉಗ್ರರನ್ನ ಫಿನೀಶ್ ಮಾಡಿದೆ.
ಈ ಕುರಿತಂತೆ ಭಾರತೀಯ ಸೇನಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ್ದಾರೆ. ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ ಮಿಸ್ರಿ, ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಅವರು ಮಾತನಾಡಿ ದಾಳಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ವಿಕ್ರಮ ಮಿಸ್ರಿ, ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನ ಉಗ್ರರು ಹತ್ಯೆ ಮಾಡಿದ್ದರು. ಕುಟುಂಬಸ್ಥರ ಎದುರೆ ಪ್ರವಾಸಿಗರನ್ನ ಉಗ್ರರು ಕೊಂದಿದ್ದರು. ಪಾಕಿಸ್ತಾನ ಉಗ್ರರ ಸ್ವರ್ಗ ಎಂಬುದನ್ನ ಮತ್ತೊಮ್ಮೆ ತೋರಿಸಿಕೊಟ್ಟಿದೆ ಉಗ್ರರ ದಾಳಿಯಿಂದ ಮೃತಪಟ್ಟವರ ಕುಟುಂಕ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ನಾವು ಅಪರೇಷನ್ ಸಿಂಧೂರ ಕಾರ್ಯಾಚರಣೆ ಮಾಡಿ ಉಗ್ರರ ನೆಲೆಗಳನ್ನ ಧ್ವಂಸ ಮಾಡಲಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ ಕಳೆದ 1 ವರ್ಷದಲ್ಲಿ 2.5 ಕೋಟಿ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಜಮ್ಮು ಕಾಶ್ಮೀರದ ಅಭಿವದ್ದಿ ಸಹಿಸದೆ ದಾಳಿ ನಡೆಸಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಲಿಂಕ್ ಇರುವುದು ಸಾಬೀತಾಗಿದೆ ಎಂದರು.
21 ಉಗ್ರರ ಕ್ಯಾಂಪ್ ಗಳು ಧ್ವಂಸ- ಕರ್ನಲ್ ಸೋಫಿಯಾ ಖುರೇಶಿ
ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 21 ಉಗ್ರರ ಕ್ಯಾಂಪ್ ಗಳನ್ನ ಧ್ವಂಸ ಮಾಡಲಾಗಿದೆ. ಉಗ್ರರ ಬರ್ನಾಲಾ ಕ್ಯಾಂಪ್ ಉಡೀಸ್ ಮಾಡಲಾಗಿದೆ. ಉಗ್ರರ ತರಬೇತಿ ನೀಡುವ ಕೇಂದ್ರಗಳನ್ನ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ರಾತ್ರಿ 1.05 ರಿಂದ 25 ನಿಮಿಷದಲ್ಲಿ ಕಾರ್ಯಾಚರಣೆ ಮುಗಿಸಿದ್ದೇವೆ 25 ನಿಮಿಷದಲ್ಲಿ 9 ಕಡೆ ಕಾರ್ಯಾಚರಣೆ ನಡೆಸಿದ್ದೇವೆ. ಪಾಕ್ ನ 4 ಉಗ್ರರ ನೆಲೆಗಳು ಪಿಒಕೆಯ 5 ನೆಲೆಗಳು ಉಡೀಸ್ ಮಾಡಲಾಗಿದೆ ಎಂದು ತಿಳಿಸಿದರು.
Key words: Operation Sindhur, 21 terrorist camps, destroyed, army officials