ಅಪರೇಷನ್ ಕಮಲ ಮಾಡಿದ್ರೆ ನಾವು ಕೈಕಟ್ಟಿ ಕೂರಲ್ಲ- ಸಚಿವ ಕೆ.ಎನ್ ರಾಜಣ್ಣ.

ಬೆಂಗಳೂರು,ಅಕ್ಟೋಬರ್,28,2023(www.justkannada.in): ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ರೂ. ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಅಪರೇಷನ್ ಕಮಲ ಮಾಡಿದ್ರೆ ನಾವು ಕೈಕಟ್ಟಿ ಕೂರಲ್ಲ.ಆಪರೇಷನ್ ಹಸ್ತ ಆಗುತ್ತೆ ಎಂದು ಎಚ್ಚರಿಕೆ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ,  ಜೆಡಿಎಸ್ ನಿಂದ ಶಾಸಕರು ಕಾಂಗ್ರೆಸ್ ಗೆ ಬರ್ತಾರೆ. ಬಿಜೆಪಿಯಿಂದಲೂ ಶಾಸಕರು ಬರ್ತಾರೆ. ಲೋಕಸಭೆ ಚುನಾವಣೆಯೊಳಗೆ ಬರುವ ಸಾಧ್ಯತೆ ಇದೆ ಎಂದರು.

5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಅಂತಾ ಹೇಳುತ್ತೇವೆ ಈ ಬಗ್ಗೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ . ಸಿಎಂ ವಿಚಾರವಾಗಿ ಶಾಸಕರ ಅಭಿಪ್ರಾಯ ಅಂತಿಮವಾಗುವುದಿಲ್ಲ. ಮೂವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

Key words:  Operation Kamala – Minister- KN Rajanna-bjp-congress