ಶಾಸಕ ಹರೀಶ್ ಪೂಂಜ ರಾಜಕಾರಣದಲ್ಲಿ ಇನ್ನೂ ಬಚ್ಚ- ಸಿಎಂ ಸಿದ್ಧರಾಮಯ್ಯ ಕಿಡಿ.

ಮಂಗಳೂರು,ಅಕ್ಟೋಬರ್,28,2023(www.justkannada.in):  ಸಿಎಂ ಎಂದರೆ ಕಲೆಕ್ಷನ್ ಮಾಸ್ಟರ್ ಎಂದು ಹೇಳಿಕೆ ನೀಡಿದ್ಧ ಶಾಸಕ ಹರೀಶ್ ಪೂಂಜ ವಿರುದ್ಧ ಕಿಡಿಕಾರಿರುವ ಸಿಎಂ ಸಿದ‍್ಧರಾಮಯ್ಯ, ಇವನು ರಾಜಕಾರಣದಲ್ಲಿ ಇನ್ನೂ ಬಚ್ಚ ಎಂದು ಹರಿಹಾಯ್ದರು.

ಮಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅವನು ನಿನ್ನೆ ಮೊನ್ನೆ ಎಂಎಲ್ ಎ ಆಗಿರುವವನು. ನಾನು 1983 ರಲ್ಲೇ ಎಂಎಲ್ ಎ ಆದವನು. 1985 ರಲ್ಲಿ ಮಂತ್ರಿಯಾದವನು. ಇವನು ರಾಜಕಾರಣದಲ್ಲಿ ಇನ್ನೂ ಬಚ್ಚ. ಅದನ್ನು ಹೋಗಿ ಬಿಜೆಪಿಯವರಿಗೆ ಹೋಗಿ ಹೇಳಲಿ ಎಂದು ಶಾಸಕ ರವಿಪೂಂಜಾಗೆ ತಿರುಗೇಟು ಕೊಟ್ಟರು.

ಗೃಹ ಸಚಿವ ಜಿ.ಪರಮೇಶ್ವರ್ ನಿವಾಸಕ್ಕೆ ತಾವು ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ‍್ಧರಾಮಯ್ಯ,  ಅವರು ಊಟಕ್ಕೆ ಕರೆದಿದ್ರು ಅದಕ್ಕೆ ಹೋಗಿದ್ದೆ. ನಾನು ಮಹದೇಪ್ಪ, ಸತೀಶ್ ಜಾರಕಿಹೊಳಿ ಇಷ್ಟು ಜನರನ್ನ ಊಟಕ್ಕೆ ಕರೆದಿದ್ರು ಅದಕ್ಕೆ ಹೋಗಿದ್ದವು. ಅದಕ್ಕೆ ಒಂದಷ್ಟು ಮಸಾಲೆ ಸೇರಿಸಿ ಸುದ್ದಿ ಮಾಡೋರೆ ನೀವು. ಲೋಕಾಭಿರಾಮವಾಗಿ ಮಾತನಾಡಿ ಬಂದಿದ್ದೇವೆ. ಅವೆಲ್ಲವು  ಮಾಧ್ಯಮಗಳ ಸೃಷ್ಟಿ ಅಷ್ಟೇ ಬೇರೇನು ಇಲ್ಲ ಎಂದು ತಿಳಿಸಿದರು.

Key words: MLA -Harish Poonja – politics – CM Siddaramaiah