ಜುಲೈ 19ರ ನಂತರವಾದ್ರೂ ಪಬ್ ಓಪನ್ ಗೆ  ಅವಕಾಶ ನೀಡಿ- ಸಿಎಂಗೆ ಮನವಿ.

ಬೆಂಗಳೂರು,ಜುಲೈ,14,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಜುಲೈ 19ರ ನಂತರವಾದರೂ ಪಬ್ ತೆರೆಯಲು ಅನುಮತಿ ನೀಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಬಾರ್ ಅಂಡ್ ಪಬ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ.jk

ಈ ಕುರಿತು ಸಿಎಂ ಬಿಎಸ್ ವೈಗೆ ಮನವಿ ಮಾಡಿರುವ  ಬಾರ್ ಅಂಡ್ ಪಬ್ ಅಸೋಸಿಯೇಷನ್ ಅಧ್ಯಕ್ಷ  ಕರುಣಾಕರ ಹೆಗ್ಡೆ,  ಕೊರೋನಾ ಹಿನ್ನೆಲೆ ಕಳೆದ 10 ತಿಂಗಳಿನಿಂದ ಪಬ್ ಗಳು ಮುಚ್ಚಿವೆ. ಈ ಮಧ್ಯೆ ಈಗ ಸರ್ಕಾರ ನಮಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.  9.50 ಲಕ್ಷ ಲೈಸೆನ್ಸ್ ರಿನಿವಲ್ ಮೊತ್ತ ಕಟ್ಟಿಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಗೆಯೇ ರಾಜ್ಯದಲ್ಲಿ ಕೋವಿಡ್ ಕಡಿಮೆಯಾಗಿದ್ದು ಜುಲೈ 19ರ ನಂತರವಾದ್ರೂ ಪಬ್ ಓಪನ್ ಗೆ ಅನುಮತಿ ನೀಡಬೇಕು ಎಂದು ಕೋರಿದರು.

Key words:  Open –Pub-Permission- after- July 19 – Request -CM