ಲಾಕ್ ಡೌನ್ ತೆರವು ಬಳಿಕ  ಕ್ರೈಂ ರೇಟ್ ಜಾಸ್ತಿ : 50 ಕೋಟಿಯಷ್ಟು ಡ್ರಗ್ ನಾಶ ಮಾಡಿದ್ದೇವೆ- ಗೃಹ ಸಚಿವ ಬಸವರಾಜ ಬೊಮ್ಮಾಯಿ.

ಮೈಸೂರು,ಜುಲೈ,14,2021(www.justkannada.in): ಕೋವಿಡ್ ವೇಳೆ ಕ್ರೈಂ ರೇಟ್ ಕಡಿಮೆ ಯಾಗಿತ್ತು. ಲಾಕ್ ಡೌನ್ ತೆರವು ಬಳಿಕ  ಕ್ರೈಂ ರೇಟ್ ಜಾಸ್ತಿಯಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.jk

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರಗಳ್ಳತನ, ದರೋಡೆಯಂತ ಪ್ರಕರಣಗಳು ಲಾಕ್ ಡೌನ್ ಮುಗಿದ ಬಳಿಕ ಕಂಡುಬರುತ್ತಿದೆ. ಮೈಸೂರು ನಗರದಲ್ಲಿ ಸರಗಳ್ಳತ ಇತ್ತು, ಆದರೆ ಈಗ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಸರಗಳ್ಳತನ ನಡೆಯುತ್ತಿದೆ. ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಚಾಲೆಂಜ್ ನಮಗಿದೆ. 50ಕೋಟಿ ಅಷ್ಟು ಡ್ರಗ್ ನಾಶ ಮಾಡಿದ್ದೇವೆ. 5 ವರ್ಷದಷ್ಟು ಡ್ರಗ್ ಕೇವಲ ಒಂದೇ ವರ್ಷದಲ್ಲಿ ಸಂಗ್ರಹವಾಗಿದ್ದು, ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಕೆಲಸವಾಗುತ್ತಿದೆ ಎಂದರು

ಡ್ರಗ್ಸ್ ವಿದೇಶದಿಂದ ಡಾರ್ಕ್ ವೆಬ್ ನಲ್ಲಿ ಬರುತ್ತಿವೆ. ಬಹಳ ಸೆಕ್ಯುರಿಟಿನಲ್ಲಿ ಬರುತ್ತಿದೆ, ಇದನ್ನ ಕರ್ನಾಟಕ ಪೊಲೀಸರು ಯಶಸ್ವಿಯಾಗಿ ಹಿಮ್ಮೆಟ್ಟಿದ್ದಾರೆ. ಬಹಳಷ್ಟು ಸಾರಿ ಸಾಮಾನ್ಯ ಪೋಸ್ಟ್ ನಲ್ಲಿ ಡ್ರಗ್ಸ್ ಸರಬರಾಜಗುತ್ತದೆ. ಡ್ರಗ್ ಕೇಸ್ ಸಂಬಂದಿಸಿದಂತೆ ವಿದೇಶಿಗರ ಬಂಧನವಾಗಿದೆ. ಕಳೆದ ವರ್ಷದಲ್ಲಿ 15ರಿಂದ 20 ಮಂದಿ ಬಂಧನವಾಗಿದೆ. ಈ ಪೈಕಿ ಆಫ್ರಿಕನ್ಸ್ ನವರೆ ಹೆಚ್ಚಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಟ್ರಾಫಿಕ್ ಫೈನ್ ಸಂಗ್ರಹದ ಹಣವನ್ನ ಸ್ಥಳೀಯ ಸಂಸ್ಥೆಗಳಿಗೆ.

ಟ್ರಾಫಿಕ್ ಫೈನ್ ಸಂಗ್ರಹದ ಹಣವನ್ನ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗ್ತಿದೆ. ಮುನ್ನೂರು ಕೋಟಿಗೂ ಅಧಿಕ ಟ್ರಾಫಿಕ್ ಫೈನ್ ಹಣ ಇದೆ. ರಸ್ತೆಗಳನ್ನು ಸರಿಪಡಿಸುವ ಕೆಲಸವನ್ನ ಸ್ಥಳೀಯ ಸಂಸ್ಥೆಗಳು ಮಾಡಬೇಕು. ಜಂಕ್ಷನ್ ಅಭಿವೃದ್ಧ ಪಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

3ರಿಂದ 4ಸಾವಿರ ಮಂದಿ ಪೊಲೀಸರಿಗೆ ಕೊರೋನಾ  ಪಾಸಿಟಿವ್

ಕೊರೋನಾ ನಿಯಂತ್ರಣ ವೇಳೆಯಲ್ಲಿ ಇಲಾಖೆಯ ಪೊಲೀಸರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ 3ರಿಂದ 4ಸಾವಿರ ಮಂದಿ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಪೈಕಿ ಎಲ್ಲರ ಆರೋಗ್ಯದ ಕಡೆಗೂ ಗಮನವಹಿಸಲಾಗುತ್ತಿದೆ. ಡೆತ್ ಅದವರ ಸಂಖ್ಯೆ ಕಡಿಮೆ ಇದೆ. ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ  30ಲಕ್ಷ ಪರಿಹಾರ ನೀಡಲಾಗುತ್ತಿದೆ. ಪೊಲೀಸರ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ವಹಿಸಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಕ್ಕೆ ಲಂಚ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ,  ಇಂತಹ ಕೆಲಸಕ್ಕೆಲ್ಲ ಇದೀಗ ಕಡಿವಾಣ ಹಾಕಲಾಗುತ್ತಿದೆ. ಇದು ಹಳೆಯ ಪದ್ದತಿ, ಆದರೆ ಇದಕ್ಕೆ ನಮ್ಮ ಸರ್ಕಾರ ಕಡಿವಾಣ ಹಾಕಿದೆ. ಪೊಲೀಸ್ ಬೋರ್ಡ್ ಬಂದಮೇಲೆ ಹಳೆಯ ಮಾದರಿಯ ವರ್ಗಾವಣೆಯಲ್ಲಿ ವ್ಯವಹಾರ ನಡೆಯೋದಿಲ್ಲ ಎಂದರು.

ಪೊಲೀಸ್ ಮಕ್ಕಳಿಗೆ ಸ್ಕಾಲರ್‌ಶಿಪ್.

ಪೊಲೀಸ್ ಮಕ್ಕಳಿಗೆ ಸ್ಕಾಲರ್‌ಶಿಪ್., ಹಿಂದಿನಿಂದಲೂ ಸ್ಕಾಲರ್‌ಶಿಪ್ ವ್ಯವಸ್ಥೆ ಇದೆ. ಈಗ ಇನ್ನಷ್ಟು ಹೆಚ್ಚಿನ ಅನುದಾನ ನೀಡಲು ತೀರ್ಮಾನ ಮಾಡಿದ್ದೇವೆ. ಎಸ್‌ಎಸ್‌ಎಲ್‌ಸಿ ಮತ್ತು ಅದಕ್ಕಿಂತ ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ಸಿಗಲಿದೆ. ಈ ಯೋಜನೆ ನಿನ್ನೆಯಿಂದ ಆರಂಭ ಆಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಪೊಲೀಸರಿಗೆ ವಸತಿ ಗೃಹಗಳ ಸೌಕರ್ಯ ಒದಗಿಸಬೇಕಿದೆ. ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ವಸತಿ ಗೃಹಗಳನ್ನು ಗುರುತಿಸಲಾಗಿದೆ. ರಾಜ್ಯಾದ್ಯಂತ ಸುಮಾರು 100 ಹೊಸ ಕಟ್ಟಡಗಳ ನಿರ್ಮಾಣಕ್ಕೂ ಚಿಂತನೆ ನಡೆಸಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ENGLISH SUMMARY…

Increase in crime rate during lockdown period: We have destroyed Rs.50 crore worth drugs – Home Minister Basavaraj Bommai
Mysuru, July 14,2021 (www.justkannada.in): “The crime rate had increased during COVID-19 Pandemic. Crime rate is increasing after lifting the lockdown,” opined Home Minister Basavaraj Bommai.
Addressing a press meet in Mysuru today, he said, “incidents of chain snatching, robbery are increasing after lockdown is lifted. Earlier, incidents of chain snatching were reported in Mysuru city, but now such incidents are taking place even in rural areas in the district. We are also facing the challenge of stopping the supply of synthetic drugs. We have destroyed drugs worth Rs.50 crore. Drugs that were enough for five years have been collected in just one year. We are also in the process of stopping synthetic drugs.”
“Drugs are being supplied from other countries through ‘Dark Web.’ However, the Karnataka Police have successfully identified it and have prevented it. In many circumstances, drugs are received through the common parcel. A few foreigners have been held in the drug cases. About 15-20 of them were held last year. Africans are more mong them,” he added.
On the occasion, the Home Minister Basavaraj Bommai also informed that three to four thousand police personnel had tested positive and measures have been taken to monitor their health. However, he said the cases of death were fewer. The Department is giving a sum of Rs. 30 lakh to the family members of the deceased personnel. Efforts are also made to give more importance to their health,” he said.
Keywords: Home Minister Basavaraj Bommai/ crime rate/ increasing/ lockdown

Key words: Crime rate – after- lockdown –clearance-mysore-Home Minister- Basavaraja Bommai.