ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ : ನಿರ್ಮಾಪಕರ ಸಂಘದಿಂದ ವಿರೋಧ

ಬೆಂಗಳೂರು,ಅಕ್ಟೊಂಬರ್,01.2020(www.justkannada.in) : ಕೇಂದ್ರ ಸರಕಾರ  ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಸಿನಿಮಾ ಹಾಲ್ ಗಳ ತೆರೆಯುವುದಕ್ಕೆ ಅನುಮತಿ ನೀಡಿದೆ. ಆದರೆ, ಕೇವಲ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅನುಮತಿ ನೀಡಿರುವುದು ಸರಿಯಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.jk-logo-justkannada-logo

ಕೇಂದ್ರ ಸರಕಾರವು ಬುಧವಾರ ಬಿಡುಗಡೆ ಮಾಡಿರುವ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಅಕ್ಟೊಂಬರ್ 15ರಿಂದ ರಿಂದ ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಎಗ್ಸ್ ಬಿಷನ್ ಹಾಲ್ ಗಳು ಮತ್ತು ಮನರಂಜನಾ ಪಾರ್ಕ್ ಗಳನ್ನು ತಮ್ಮ ಆಸನ ಸಾಮಾರ್ಥ್ಯದ ಶೇ.50 ರಷ್ಟನ್ನು ಮಾತ್ರ ಭರ್ತಿ ಮಾಡುವ ನಿಯಮ ಪಾಲನೆ ಮಾಡುವುದರೊಂದಿಗೆ ಪುನರಾರಂಭ ಮಾಡಬಹುದು ಎಂದು ಹೇಳಿದೆ.

Only-50%-audience-theaters-allowed-Opposition-Producers-Association

ಬಿಗ್ ಬಜೆಟ್ ಸಿನಿಮಾ ವೀಕ್ಷಣೆಗೆ ಹೆಚ್ಚಿನ ಪ್ರೇಕ್ಷಕರಿಗೆ ಅವಕಾಶ ನೀಡಿ

ಈ ಕುರಿತು ಪ್ರವೀಣ್ ಕುಮಾರ್ ಪ್ರತಿಕ್ರಿಯಿಸಿದ್ದು, ಕೇಂದ್ರ ಸರಕಾರದ ಈ ಮಾರ್ಗಸೂಚಿಗೆ ಬಿಗ್ ಬಜೆಟ್ ನಿರ್ಮಾಪಕರಿಂದ ವಿರೋಧವ್ಯಕ್ತವಾಗಿದೆ. ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಣೆಗೆ ಅನುಮತಿ ನೀಡಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ, ಬಿಗ್ ಬಜೆಟ್ ಸಿನಿಮಾಗಳ ವೀಕ್ಷಣೆಗೆ ಹೆಚ್ಚಿನ ಪ್ರೇಕ್ಷಕರಿಗೆ ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ದೇಶದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯ ಹೊರತಾಗಿಯೂ, ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಹೆಚ್ಚಿನ ಸಡಿಲತೆ ಮತ್ತು ಕಡಿಮೆ ನಿರ್ಬಂಧಗಳಿವೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ತಾನು ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಶಿಸ್ತುಬದ್ಧವಾಗಿ ಅನುಸರಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

key words : Only-50%-audience-theaters-allowed-Opposition-Producers-Association