Saturday, August 1, 2026

BDA Apartments

Home Crime ಬುಕ್ ಮಾಡಿದ್ದು 1.85 ಲಕ್ಷ ರೂ. ಮೌಲ್ಯದ ಮೊಬೈಲ್: ಪಾರ್ಸಲ್ ಬಂದಿದ್ದು ನೋಡಿ ಗ್ರಾಹಕನೇ ಶಾಕ್..

ಬುಕ್ ಮಾಡಿದ್ದು 1.85 ಲಕ್ಷ ರೂ. ಮೌಲ್ಯದ ಮೊಬೈಲ್: ಪಾರ್ಸಲ್ ಬಂದಿದ್ದು ನೋಡಿ ಗ್ರಾಹಕನೇ ಶಾಕ್..

ಬೆಂಗಳೂರು,ಅಕ್ಟೊಬರ್,30,2025 (www.justkannada.in): ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು, ಆನ್ ಲೈನ್ ವಂಚಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆನ್ ಲೈನ್ ಶಾಪಿಂಗ್ ಮಾಡುವಾಗ ಸಾಕಷ್ಟು ಎಚ್ಚರ ವಹಿಸಬೇಕು. ಹೌದು, ಇಲ್ಲೊಬ್ಬರು ವ್ಯಕ್ತಿ ಅಮೆಜಾನ್ ಆಪ್ ನಲ್ಲಿ 1.85 ಲಕ್ಷ ರೂಪಾಯಿಯ ಮೊಬೈಲ್ ಬುಕ್ ಮಾಡಿದ್ದು ಆದರೆ  ಪಾರ್ಸಲ್ ನಲ್ಲಿ ಬಂದಿದ್ದು ಮಾತ್ರ ಮೊಬೈಲ್ ಬದಲು ಟೈಲ್ಸ್ ಕಲ್ಲು..!

ಹೌದು, ಇಂತಹದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಪ್ರೇಮಾನಂದ್ ಎಂಬುವವರೇ ಈ ರೀತಿ ಮೋಸ ಹೋದವರು. ಇಂಜಿನಿಯರ್ ಪ್ರೇಮಾನಂದ್ ಕೆಲ ದಿನಗಳ ಹಿಂದೆ ಅಮೆಜಾನ್ ಆಪ್ ನಲ್ಲಿ 1 ಲಕ್ಷದ 85 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಝಡ್ ಫೋಲ್ಡ್ ಮೊಬೈಲ್ ಬುಕ್ ಮಾಡಿದ್ದರು. ಆಪ್ ನಲ್ಲಿ ನಿಗದಿಯಾದ ಡೇಟ್ ನಂತೆ ಆರ್ಡರ್ ಡೆಲಿವರಿಯಾಗಿತ್ತು.  ಹಣವನ್ನೂ ಸಹ ಪ್ರೇಮಾನಂದ್ ಪಾವತಿ ಮಾಡಿದ್ದರು ಎನ್ನಲಾಗಿದೆ.

ಪ್ರೇಮಾನಂದ್ ಬಂದ ಪಾರ್ಸಲ್ ತೆರೆದು ನೋಡಿದರೆ ಮೊಬೈಲ್ ಬದಲು ಬಾಕ್ಸ್ ನಲ್ಲಿ ಒಂದು ಟೈಲ್ಸ್ ಕಲ್ಲು ಇದೆ. ಇದನ್ನು ನೋಡಿ ಶಾಕ್ ಆದ ಪ್ರೇಮಾನಂದ್ ಡೆಲಿವರಿ ಬಾಯ್ ಗೆ ತಕ್ಷಣ ಕರೆ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ . ಬಳಿಕ ಎನ್ ಸಿ ಆರ್ ಪಿ ಪೋರ್ಟ್ ನಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.

ಹೀಗೆ ಇತ್ತೀಚೆಗೆ ಆನ್ ಲೈನ್ ವಂಚನೆ ಪ್ರಕರಣಗಳು ಮಿತಿ ಮೀರಿದ್ದು ಎಷ್ಟೇ ಎಚ್ಚರ ವಹಿಸಿದರೂ ಸಹ ಸೈಬರ್ ವಂಚಕರ, ಆನ್ ಲೈನ್  ವ್ಯವಹಾರದಲ್ಲಿ  ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

Key words: Online shoppers, Shock, customer, booked, mobile worth, Rs. 1.85 lakh