ಆನ್ ಲೈನ್ ನಲ್ಲಿ ಲೋನ್ ಪಡೆಯುವವರೇ ಎಚ್ಚರ:  ಕಿರುಕುಳ ತಾಳಲಾರದೇ ವಿದ್ಯಾರ್ಥಿ ಆತ್ಮಹತ್ಯೆ.

ಬೆಂಗಳೂರು,ಜುಲೈ,12,2023(www.justkannada.in):  ಚೀನಾ ಆ್ಯಪ್ ಮೂಲಕ ಆನ್ ಲೈನ್ ನಲ್ಲಿ ಲೋನ್ ಪಡೆದಿದ್ದ ವಿದ್ಯಾರ್ಥಿಯೊಬ್ಬ ಲೋನ್ ನೀಡಿದವರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಹೆಚ್​ಎಂಟಿ ಕ್ವಾರ್ಟರ್ಸ್​ನಲ್ಲಿ ಈ ಘಟನೆ ನಡೆದಿದ್ದು ತೇಜಸ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸ್ನೇಹಿತ ಮಹೇಶ್​ ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ‌ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದು, ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋನ್ ಕೊಟ್ಟವರು ಟಾರ್ಚರ್​ ನೀಡುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಡೆತ್ ನೋಟ್ ಬರೆದಿಟ್ಟು  ತೇಜಸ್ ತಾಯಿಯ ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಪ್ಪ ಅಮ್ಮ ನನ್ನನ್ನ ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ’ ‘ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ, ಇದು ನನ್ನ ಕೊನೆ ತೀರ್ಮಾನ’ ‘ಥ್ಯಾಂಕ್ಸ್ ಗುಡ್​ ಬೈ’ ಎಂದು ಡೆತ್ ನೋಟ್​ ಬರೆದಿಟ್ಟು ತೇಜಸ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಎಂಎಸ್​ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಗೆ ತೇಜಸ್ ಪೋಷಕರು ದೂರು ನೀಡಿದಿದ್ದಾರೆ.

Key words: Online –loan- takers –beware-harassment-student -committed suicide.