ಆನ್ ಲೈನ್ ಪರೀಕ್ಷೆ: ಕ್ರೈಸ್ಟ್ ಯೂನಿವರ್ಸಿಟಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಬೆಂಗಳೂರು, ಜುಲೈ 13, 2020: ಕ್ರೈಸ್ಟ್ ಯೂನಿವರ್ಸಿಟಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಪಡಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಆದೇಶ ಗಾಳಿಗೆ ತೂರಿದ ಕ್ರೈಸ್ಟ್ ಯೂನಿವರ್ಸಿಟಿ ಡಿಗ್ರಿ ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್ ಲೈನ್ ಪರೀಕ್ಷೆ ನಡೆಸುತ್ತಿದೆ. ಆನ್ ಲೈನ್ ಪರೀಕ್ಷೆ ನಡೆಸದಂತೆ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕ ಪ್ರತಿಭಟನೆ ನಡೆಸಿದೆ.

ಡೈರಿ ಸರ್ಕಲ್ ಬಳಿ ಇರುವ ಕ್ರೈಸ್ಟ್ ಯೂನಿವರ್ಸಿಟಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಒಂದು ದಿನ ಕ್ಲಾಸ್ ನಡೆದಿಲ್ಲ. ಆನ್ ಲೈನ್ ಪಾಠ ನಮಗೆ ಅರ್ಥ ಆಗಿಲ್ಲ ಹೀಗಾಗಿ ಪರೀಕ್ಷೆ ನಡೆಸದಂತೆ ವಿವಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ್ದಾರೆ.

ನಾಳೆ ರಾತ್ರಿಯಿಂದ ಲಾಕ್ ಡೌನ್ ಇರಲಿದೆ. ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಮನವಿ ಸ್ವೀಕರಿಸದ ಯೂನಿವರ್ಸಿಟಿ ಕುಲಪತಿಗಳು ಕ್ರಮದ ಭರವಸೆ ನೀಡಿದ್ದಾರೆ.

ವಿವಿ ಕ್ಯಾಂಪಸ್ ಗೇಟ್ ಬೀಗ ಹಾಕಿ‌ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದ ಪೊಲೀಸರು…