ಓಮಿಕ್ರಾನ್ ‌ಆತಂಕ: ಈ ಬಾರಿಯೂ ಮಾಗಿ ಉತ್ಸವಕ್ಕೆ ಬ್ರೇಕ್ ಸಾಧ್ಯತೆ.

ಮೈಸೂರು,ಡಿಸೆಂಬರ್,6,2021(www.justkannada.in):   ಕೊರೋನಾ ಬಳಿಕ ಇದೀಗ ಕೊರೋನಾ ರೂಪಾಂತರಿ ಒಮಿಕ್ರಾನ್ ಆತಂಕ ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗಾಗಲೇ ರಾಜ್ಯ ಸರ್ಕಾರ ಕೆಲ ನಿಯಮಗಳನ್ನ ಜಾರಿಗೆ ತಂದಿದೆ. ಈ ನಡುವೆ ಕಳೆದ ಬಾರಿ ಕೋವಿಡ್ ನಿಂದ ಸ್ಥಗಿತಗೊಂಡಿದ್ದ ಮಾಗಿ ಉತ್ಸವಕ್ಕೆ ಈ ಬಾರಿಯೂ ಬ್ರೇಕ್ ಬೀಳುವ ಸಾಧ್ಯತೆ ಇದೆ.

ಈ ಬಾರಿ ಮಾಗಿ ಉತ್ಸವ ಆಚರಣೆಗೆ ಓಮಿಕ್ರಾನ್ ಆತಂಕ ಎದುರಾಗಿದ್ದು ಜೊತೆಗೆ ಮತ್ತೆ ಪ್ರವಾಸೋದ್ಯಮಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಒಮಿಕ್ರಾನ್ ತೀವ್ರತೆ ಕಡಿಮೆ ಇದ್ದರೂ ಹರಡುವಿಗೆ ವೇಗವಾಗಿದ್ದು ಈ ಹಿನ್ನೆಲೆಯಲ್ಲಿ  ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದು ಹೀಗಾಗಿ ಓಮಿಕ್ರಾನ್ ಹೊಡೆತಕ್ಕೆ ಮತ್ತೆ ಉದ್ಯಮಿಗಳು, ಸಣ್ಣ ವ್ಯಾಪಾರಸ್ಥರು ನಲುಗಲಿದ್ದಾರೆಯೇ ಎನ್ನಲಾಗುತ್ತಿದೆ.

ಒಮಿಕ್ರಾನ್ ಆತಂಕದಿಂದಾಗಿ ಹೊರರಾಜ್ಯದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಮೈಸೂರಿನಲ್ಲಿ ಸೋಂಕು ಹೆಚ್ಚಾದರೇ ಪ್ರವಾಸಿ ತಾಣಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

Key words: Omicron- anxiety-mysore- possible -break – Magi Festival.