ಭಾರಿ ಮಳೆಗೆ ಮನೆ ಕುಸಿದು ವೃದ‍್ಧೆ ಸಾವು: ಇಬ್ಬರಿಗೆ ಗಾಯ.

ಕಲಬುರಗಿ,ಜುಲೈ,9,2022(www.justkannada.in): ಭಾರಿ ಮಳೆಗೆ ಮನೆಯ ಗೋಡೆ  ಕುಸಿದು ಬಿದ್ದ ಪರಿಣಾಮ ವೃದ್ಧೆ  ಮೃತಪಟ್ಟಿರುವ ಘಟನೆ  ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ.

ಆರೀಫಾ ಬೇಗಂ(65) ಮೃತಪಟ್ಟವರು. ಪತಿ ಸರ್ದಾರ್ ಆಲಿ ಮತ್ತು ಮಗಳು ಯಾಸ್ಮಿನ್ ಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾತ್ರಿ ಮನೆಯಲ್ಲಿ ಮಲಗಿದ್ದಾಗ ಮೇಲ್ಚಾವಣಿ ಕುಸಿದ ಪರಿಣಾಮ ವೃದ್ದೆ ಗಾಯಗೊಂಡಿದ್ದರು. ಕೂಡಲೆ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವೃದ್ದೆ ಸಾವನ್ನಪ್ಪಿದ್ದಾರೆ. ಚಿತ್ತಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: Old woman-dies – house -collapses – heavy rain.