ಸೈನ್ಸ್ ಎಕ್ಸ್‌ ಪೊನಲ್ಲಿ ಗಮನ ಸೆಳೆದ ಮೈಸೂರು ವಿವಿ ಜೆನಿಟಿಕ್ಸ್ ವಿಭಾಗದ ವಸ್ತುಪ್ರದರ್ಶನ.

ಮೈಸೂರು,ಜುಲೈ,9,2022(www.justkannada.in): ಸೈನ್ಸ್ ಫೌಂಡೇಶನ್ ವತಿಯಿಂದ ನಗರದ ವಿಜಯನಗರ 2ನೇ ಹಂತದಲ್ಲಿರುವ ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸೈನ್ಸ್ ಎಕ್ಸ್‌ ಪೊ-2022ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಹಾಗೂ ಜೆನೊಮಿಕ್ಸ್ ವಿಭಾಗದ ವಸ್ತು ಪ್ರದರ್ಶನ ಗಮನ ಸೆಳೆಯುತ್ತಿದೆ.

‘‘ಅನುವಂಶಿಯ ಕಾಯಿಲೆಗಳು ಯಾಕೆ ಬರುತ್ತದೆ. ಅದರಲ್ಲಿ ಎಷ್ಟು ವಿಧಗಳಿವೆ? ಕಾಯಿಲೆ ಲಕ್ಷಣ ಏನು? ಅನುವಂಶಿಕ ಕಾಯಿಲೆಗೆ ಮದ್ದಿಲ್ಲ. ವಾಸಿ ಮಾಡಲು ಆಗುವುದಿಲ್ಲ. ಆದರೆ, ಕಾಯಿಲೆ ಬರದಂತೆ ನಿರ್ವಹಣೆ ಮಾಡಬಹುದು. ಸಂಬಂಧದಲ್ಲಿ ಯಾಕೆ ಮದುವೆ ಆಗಬಾರದು. ಮದುವೆಯಾದರೆ ಅನುವಂಶಿಯ ಕಾಯಿಲೆ ಹೇಗೆ ಬರುತ್ತದೆ? ಎಂಬಿತ್ಯಾದಿ ಅಂಶಗಳನ್ನು ಸೈನ್ಸ್ ಎಕ್ಸ್‌ ಪೊ ನಲ್ಲಿ ನಮ್ಮ ವಿದ್ಯಾರ್ಥಿಗಳು ಮಕ್ಕಳಿಗೆ ವಿವರಿಸುತ್ತಿದ್ದಾರೆ. ಅಲ್ಲದೆ, ಪ್ರತಿಯೊಂದು ಜೀವಿಯಲ್ಲೂ ನಿರ್ದಿಷ್ಟ ಸಂಖ್ಯೆಯ ವರ್ಣತಂತು ಇರುತ್ತದೆ. ಒಂದು ವೇಳೆ ಈ ವರ್ಣತಂತು ಸಂಖ್ಯೆಯಲ್ಲಿ ವ್ಯತ್ಯಾಸವಾದರೆ ಹಲವು ರೀತಿಯ ಕಾಯಿಲೆ ಬರುತ್ತದೆ. ಬುದ್ಧಿಮಾಂಧ್ಯತೆ ಕೂಡ ಕಾಡಬಹುದು,’’ ಎಂದು ಜೆನೆಟಿಕ್ಸ್ ಹಾಗೂ ಜೆನೊಮಿಕ್ಸ್ ವಿಭಾಗದ ಅಧ್ಯಕ್ಷರಾದ ಡಾ.ಸುತ್ತೂರು ಮಾಲಿನಿ ತಿಳಿಸಿದ್ದಾರೆ.

ಕೆಲವು ಹೆಣ್ಣುಮಕ್ಕಳು ಹೆಣ್ತನದ ಲಕ್ಷಣಗಳು ಇರುವುದಿಲ್ಲ. ಗಂಡು ಮಕ್ಕಳಲ್ಲೂ ಇದೆ ಸಮಸ್ಯೆ ಇರುತ್ತದೆ. ಎಕ್ಸ್‌ ವೈ ಜೊತೆಗೆ ಮತ್ತೊಂದು ಎಕ್ಸ್ ಇದ್ದರೆ ಈ ಸಮಸ್ಯೆ ಕಾಡುತ್ತದೆ. ಇದನ್ನು ಗೊಂಬೆಗಳ ಮೂಲಕ ವಿವರಿಸುವ ಪ್ರಯತ್ನ ಮಾಡಲಾಗಿದೆ. ವರ್ಣತಂತುವಿನ ವ್ಯತ್ಯಾಸ ಬಗ್ಗೆ ಸಾಕಷ್ಟು ಮಾಹಿತಿ ಇದೆ. ವಯಸ್ಸಾದ ತಾಯಿ ಮಗುವನ್ನು ಹೆತ್ತರೆ ಹಾಗೂ ಕೆಲವೊಂದು ಆಹಾರ ಪದಾರ್ಥ ಸೇವಿಸಿದರೆ ಮಕ್ಕಳಿಗೆ ಈ ರೀತಿಯ ಸಮಸ್ಯೆ ಕಾಡುತ್ತದೆ,’’ ಎಂದು ತಿಳಿಸಿದ್ದಾರೆ.

ಇದೇ ಎಕ್ಸ್‌ ಪೊನಲ್ಲಿ ಇಸ್ರೋ ಸಂಸ್ಥೆಯ ಗಾಲಿಗಳ ಮೇಲೆ ಬಾಹ್ಯಾಕಾಶ ಸಂಚಾರಿ ಬಸ್, ಆರ್ಯಭಟ ಸಂಸ್ಥೆಯಿಂದ ಸಂಚಾರಿ ತಾರಾಲಯ-3ಡಿ ವಿಡಿಯೊ ಪ್ರದರ್ಶನ ಗಮನ ಸೆಳೆಯುತ್ತಿದೆ.

Key words: Mysore University – Genetics –department- exhibition – Science Expo- attracted