ರಾಮನಗರ,ಡಿಸೆಂಬರ್,19,2025 (www.justkannada.in): ತನ್ನನ್ನು ಲವ್ ಮಾಡುವಂತೆ 19 ವರ್ಷದ ಯುವತಿ ಹಿಂದೆ ಬಿದ್ದ 40 ವರ್ಷದ ವ್ಯಕ್ತಿಯನ್ನ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಗಟ್ಟಿಪುರ ಬಳಿ ನಡೆದಿದೆ.
40 ವರ್ಷದ ಚಲುವ ಹತ್ಯೆಯಾದ ವ್ಯಕ್ತಿ. ಈತ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದ ನಿವಾಸಿ. ಈತ 19 ವರ್ಷದ ಯುವತಿ ಹಿಂದೆ ಬಿದ್ದು ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಈ ಮಧ್ಯೆ ಯುವತಿಯ ತಂದೆ ಮತ್ತು ಸೋದರ ಮಾವಂದಿರು ಚಲುವನನ್ನು ಕುಣಿಗಲ್ ನಿಂದ ಅಪಹರಿಸಿಕೊಂಡು ಕರೆದೊಯ್ತಿದ್ದಾರೆ.
ನಂತರ ನಿನ್ನೆ ಕಾರಿನಲ್ಲಿ ಕರೆದೊಯ್ದು ಮಾಗಡಿ ತಾಲ್ಲೂಕಿನ ಗಟ್ಟಿಪುರ ಬಳಿ ಚಲುವನನ್ನು ಕೊಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಮಾಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
Key words: 40-year-old man, murdered , love, 19-year-old, woman







