ಮೈಸೂರು ದಸರಾ ಜಂಬೂಸವಾರಿಗೆ ಆನೆಗಳು ಇನ್ನಿತರ ತಯಾರಿ ಕುರಿತ ಅಧಿಕಾರಿಗಳ ಸಭೆ: ಸಚಿವ ಈಶ್ವರ್ ಖಂಡ್ರೆ

ಮೈಸೂರು, ಜುಲೈ 16, 2023 (www.justkannada.in): ಮೈಸೂರು ದಸರಾ ಜಂಬೂಸವಾರಿಗೆ ಆನೆಗಳು ಇನ್ನಿತರ ತಯಾರಿ ಬಗ್ಗೆ ಸವಿಸ್ತಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಮೈಸೂರಿನಲ್ಲಿ ದಸರಾ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ಜಂಬೂಸವಾರಿಗೆ ಆನೆಗಳು ಇನ್ನಿತರ ತಯಾರಿ ಬಗ್ಗೆ ಸವಿಸ್ತಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು  ಹೇಳಿದರು.

ನಾಳೆ ಕಾಂಗ್ರೆಸ್ ಮಿತ್ರ ಪಕ್ಷಗಳ ಸಭೆ ಹಿನ್ನಲೆ ಕುರಿತು ಪ್ರತಿಕ್ರಿಯಿಸಿ, ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳು ಆಗಿವೆ. ಇವತ್ತು ದೇಶದಲ್ಲಿ ಜನ ಬದಲಾವಣೆ ಬಯಸ್ತಾ ಇದ್ದಾರೆ. ಆ ಒಂದು ದೃಷ್ಟಿಯಿಂದ ಎಲ್ಲಾ ಮಿತ್ರ ಪಕ್ಷಗಳು ಒಗ್ಗೂಡಿ. ದೇಶದಲ್ಲಿ ನಡೆಯುತ್ತಿರುವ ದುರಾಡಳಿತ ವಿರುದ್ಧ ಒಂದು ತೀರ್ಮಾನ ಮಾಡ್ತಾರೆ. ಒಗ್ಗಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆ ತಯಾರಿ ನಡೆಯುತ್ತದೆ. ದೇಶದಲ್ಲಿರುವ ಎಲ್ಲಾ ಪ್ರತಿಫಕ್ಷಗಳು ಭಾಗಿಯಾಗುತ್ತವೆ. ಯಾರು ಸಂವಿಧಾನ,ಪ್ರಜಾಪ್ರಭುತ್ವ ಉಳಿಸಬೇಕು ಅಂತಾರೆ ಅವರೆಲ್ಲರೂ ಭಾಗಿಯಾಗ್ತಾರೆ ಎಂದು ಹೇಳಿದರು.

ಮೈಸೂರು ಮೃಗಾಲಯಕ್ಕೆ ಭೇಟಿ: ಇಂದು ಮೈಸೂರು ಮೃಗಾಲಯಕ್ಕೆ ಪ್ರಪ್ರಥಮವಾಗಿ ಭೇಟಿ ನೀಡಿದ್ದೇನೆ. ಮೃಗಾಲಯದಲ್ಲಿ 5 ಸಿಂಹಗಳಿವೆ. ಅದರಲ್ಲಿ ರಾಜು ಮತ್ತು ನಿರ್ಭಯ ಮರಿಗಳಿಗೆ ಜನಿಸಿದ ಸಿಂಹದ ಮರಿಗಳಿಗೆ ಸೂರ್ಯ,ಚಂದ್ರ,ಕಬಿನಿ ಎಂದು ನಾಮಕರಣ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಮೃಗಾಲಯವನ್ನ ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಲಕ್ಷಾಂತರ ಜನ ಭೇಟಿ ನೀಡ್ತಿದ್ದಾರೆ. ಈ ಭೂಮಿಯಲ್ಲಿ ಇರುವ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಈ ಮೃಗಾಲಯ ಪ್ರಾಣಿ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸಲು ಮೃಗಾಲಯ ಸಹಕಾರಿ ನೀಡುತ್ತದೆ. ಮೃಗಾಲಯ ಅಭಿವೃದ್ಧಿಗೆ ಅಧಿಕಾರಿಗಳ ಸಭೆ ನಡೆಸಿ, ಇಡೀ ದೇಶದಲ್ಲಿಯೇ ಉತ್ತಮ ಮೃಗಾಲಯ ಮಾಡುವ ನಿಟ್ಟಿನಲ್ಲಿ ಕ್ರಮ ಜರುಗಿಸುತ್ತೇವೆ ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವ ಈಶ್ವರ್ ಖಂಡ್ರೆ: ಹೆಚ್ ಡಿ ಕೋಟೆ ತಾಲ್ಲೂಕಿನ ಕಾರಾಪುರದ ಖಾಸಗಿ ರೆಸಾರ್ಟ್ ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಚಿವ ಈಶ್ವರ್ ಖಂಡ್ರೆ ಸಭೆ ನಡೆಸಿದರು. ಸಭೆಯಲ್ಲಿ ಶಾಸಕ ಅನಿಲ್ ಚಿಕ್ಕಮಾಧು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಕಾಡು ಪ್ರಾಣಿಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ಅನಾನುಕೂಲಗಳ ಕುರಿತು ಚರ್ಚೆ ನಡೆಯಿತು.