ಏಕದಿನ ವಿಶ್ವಕಪ್: ನಾಳೆ ಬೆಂಗಳೂರಿನಲ್ಲಿ ಭಾರತ-ನೆದರ್ಲ್ಯಾಂಡ್ ಪಂದ್ಯ:  ಪೊಲೀಸ್ ಬಿಗಿ ಭದ್ರತೆ

ಬೆಂಗಳೂರು, ನವೆಂಬರ್,11,2023(www.justkannada.in): ಏಕದಿನ ವಿಶ್ವಕಪ್ ಲೀಗ್ ಕೊನೆಯ ಪಂದ್ಯ ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ ಲ್ಯಾಂಡ್​ ನಡುವೆ ನಡೆಯಲಿದ್ದು, ಸ್ಟೇಡಿಯಂ ಸುತ್ತಾ ಮುತ್ತಾ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಈ ಕುರಿತು ಮಾತನಾಡಿರುವ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್​ಟಿ, ಬೆಂಗಳೂರಲ್ಲಿ ಒಟ್ಟು ಐದು ಪಂದ್ಯ ನಿಗಧಿಯಾಗಿತ್ತು. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದೆ, ಐದನೇ ಪಂದ್ಯ ನಾಳೆ ನಡೆಯಲಿದೆ. ನಾಳೆ ಭಾರತ-ನೆದರ್ಲ್ಯಾಂಡ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಹೀಗಾಗಿ ಚಿನ್ನಸ್ವಾಮಿ‌ ಸ್ಟೇಡಿಯಂ ಸುತ್ತಾ ಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಒಂಬತ್ತು ಮಂದಿ ಎಸಿಪಿ, 28 ಇನ್ಸ್​​ಪೆಕ್ಟರ್, 86 ಮಂದಿ ಪಿಎಸ್‌ಐಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ, 4 ಕೆಎಸ್ ​ಆರ್​ಪಿ ತುಕಡಿ, 2 ಡಿ ಸ್ವಾಟ್ ಆಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ವಿಧ್ವಂಸಕ ಕೃತ್ಯ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂನ ಎಲ್ಲಾ ಗೇಟ್ ಬಳಿ ವಿದ್ವಾಂಸಕ ಕೃತ್ಯ ತಪಾಸಣೆ ಕೈಗೊಳ್ಳುತ್ತೇವೆ. ಟಿಕೆಟ್ ಹಿಂದೆ ನಮೂದಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಡಿಸಿಪಿ ಶೇಖರ್ ಹೆಚ್​ಟಿ ತಿಳಿಸಿದರು.

ಈಗಾಗಲೇ ವಿಶ್ವಕಪ್ ಮೊದಲ ಸೆಮಿಫೈನಲ್ ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಡ್  2ನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಆಡುವುದು ಬಹುತೇಕ ಖಚಿತವಾಗಿದೆ.

Key words: ODI World Cup- India-Netherlands- match – Bengaluru –tomorrow-tight security