ಏಕದಿನ ವಿಶ್ವಕಪ್: ಭಾರತಕ್ಕೆ 257 ರನ್ ಗಳ ಗುರಿ ನೀಡಿದ ಬಾಂಗ್ಲಾ.

ಪುಣೆ,ಅಕ್ಟೋಬರ್,19,2023(www.justkannada.in):  ಐಸಿಸಿ ಏಕದಿನ ವಿಶ್ವಕಪ್‌ ಇಂದು ಭಾರತ ಹಾಗೂ ಬಾಂಗ್ಲಾದೇಶದ ನಡುವೆ 17ನೇ ಪಂದ್ಯ ನಡೆಯುತ್ತಿದ್ದು ಭಾರತಕ್ಕೆ ಬಾಂಗ್ಲ 257 ರನ್ ಟಾರ್ಗೆಟ್ ನೀಡಿದೆ.

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದೆ. ಬಾಂಗ್ಲಾ ಪರ ಆರಂಭಿಕರಾಗಿ ಕಣಕ್ಕಿಳಿದ ತನ್ಷದ್ ಹಸನ್ 51 ರನ್ ಮತ್ತು ಲಿಟಲ್ ದಾಸ್ 66 ರನ್ ಗಳಿಸಿ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

ಉತ್ತಮವಾಗಿ ಆಟವಾಡುತ್ತಿದ್ದ ತನ್ಷದ್ ಹಸನ್  ಕುಲ್ದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಹಸಿನ್ ಶಾಂಟೋ ಮತ್ತು ಮೆಹದಿ ಹಸನ್ ಮಿರಜ್ ಹೆಚ್ಚು ಹೊತ್ತು ನಿಲ್ಲಲಿಲ್ಲ.  ನಂತರ ಮುಸ್ತಿಫರ್ ರಹೀಮ್ 38 ರನ್ ಮಹಮ್ಮದುಲ್ಲಾ 46 ರನ್ ಗಳಿಸಿ ಬಾಂಗ್ಲಾ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಬಾಂಗ್ಲಾ 8 ವಿಕಟ್ ನಷ್ಟಕ್ಕೆ 256 ರನ್ ಪೇರಿಸಿದ್ದು ಭಾರತಕ್ಕೆ 257 ರನ್ ಗುರಿ ನೀಡಿದೆ.

ಭಾರತದ ಪರ ಬೌಲಿಂಗ್ ಮಾಡಿದ ಜಸ್ಪ್ರೀತ್ ಬೂಮ್ರಾ , ಸಿರಾಜ್, ಜಡೇಜಾ, ತಲಾ ಎರಡು ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್  ತಲಾ 1 ವಿಕೆಟ್ ಕಬಳಿಸಿದರು.

Key words:  ODI World Cup- Bangladesh- set- target – 257 runs.- India