ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಕುರಿತು ಒಡನಾಡಿ ಸಂಸ್ಥೆಯಲ್ಲಿ ಸಂವಾದ: ನ್ಯಾಯಬದ್ಧ ತನಿಖೆಗೆ ಆಗ್ರಹ..

ಮೈಸೂರು,ಜುಲೈ,13,2023(www.justkannada.in): ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ನ್ಯಾಯಬದ್ಧ ತನಿಖೆಗೆ ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಆಗ್ರಹಿಸಲಾಯಿತು.

ಇಂದು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಪ್ರಕರಣದ ನ್ಯಾಯಯುತ ತನಿಖೆಗೆ ಆಗ್ರಹಿಸಿ  ಕೆಲ ಬುದ್ದಿ ಜೀವಿಗಳು ಮತ್ತು ಪ್ರಗತಿಪರ ಚಿಂತಕರ ಸಮಾಗಮದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಒಡನಾಡಿ ಸೇವಾ ಸಂಸ್ಥೆ ವತಿಯಿಂದ ಒಡನಾಡಿ ಸಂಸ್ಥಾಪಕರಾದ ಸ್ಟ್ಯಾನ್ಲಿ ಮತ್ತು ಪರಶುರವರ ನೇತೃತ್ವದಲ್ಲಿ  ಆಯೋಜನೆ ಮಾಡಲಾಗಿತ್ತು.

ಸೌಜನ್ಯ ಅತ್ಯಾಚಾರ ಹತ್ಯೆ ಪ್ರಕರಣದಲ್ಲಿ ಆಗುತ್ತಿರುವ ನ್ಯಾಯ ವಿಳಂಬದ ಹಿನ್ನೆಲೆಯಲ್ಲಿ  ಪ್ರಕರಣ ಕುರಿತು ಒಡನಾಡಿ ಸಂಸ್ಥೆ ಮುಖ್ಯಸ್ಥರು ಸ್ವಹಿತಾಸಕ್ತಿ ವಹಿಸಿದ್ದು ಸಂವಾದ ಕಾರ್ಯಕ್ರಮದಲ್ಲಿ ಮೃತ ಬಾಲಕಿ ತಾಯಿ, ತಂಗಿ ಸೋದರ ಮಾವ ಭಾಗಿಯಾಗಿದ್ದರು.

ಪ್ರಗತಿಪರ ಚಿಂತಕರಾದ  ಸಿ .ಸವಲಿಂಗಯ್ಯ, ದಿವಾಕರ್, ಪ್ರೊ ಕಾಳೇಗೌಡ ನಾಗವಾರ, ಸವಿತಾ ಪ ಮಲ್ಲೇಶ್, ಕೆ ಗೋಪಾಲಕೃಷ್ಣ, ಮಾಜಿ ಮೇಯರ್ ಪುರುಶೋತ್ತಮ್, ಬೆಟ್ಟಯ್ಯ ಕೊಟೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಳೆದ 11 ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಲ್ಲಿಯ ನಿವಾಸಿ ಕುಮಾರಿ ಸೌಜನ್ಯ ಎಂಬ ಬಾಲಕಿ ಮೇಲೆ ಅತ್ಯಾಚಾರ ಕೊಲೆ ನಡೆದ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲ ದುರುಳರ ದುಷ್ಕೃತ್ಯದಿಂದ ಬಾಲಕಿ ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದು ಈ ಪ್ರಕರಣದಲ್ಲಿ ಇಂದಿಗೂ ನ್ಯಾಯ ಸಿಗದೆ ಆರೋಪಿಗಳ ಶಿಕ್ಷೆಯಾಗಿಲ್ಲ.

ಸ್ಥಳೀಯ ಪೋಲಿಸ್ ಸಿಒಡಿ ತನಿಖೆ  ಹಾಗೂ ಸಿಬಿಐ ತನಿಖೆಗಳಿಂದ ಧನಾತ್ಮಕ ಬೆಳವಣಿಗೆ ಸಿಗದೆ ಬಾಲಕಿ ಪೋಷಕರು ನೊಂದಿದ್ದು,  ಬಂಧಿತ ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿನಿಜವಾದ ಆರೋಪಿ  ಬಂಧನಕ್ಕಾಗಿ ಪ್ರಗತಿಪರರು ಆಗ್ರಹಿಸಿದ್ದಾರೆ.

Key words: odanadi -Conversation – sowjanya-rape –murder- case- fair -investigation..