Saturday, September 5, 2026

BDA Apartments

Home Front Page ಸಚಿವರಾಗಿ ಯು.ಟಿ ಖಾದರ್ , ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ವಚನ ಸ್ವೀಕಾರ

ಸಚಿವರಾಗಿ ಯು.ಟಿ ಖಾದರ್ , ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ವಚನ ಸ್ವೀಕಾರ

ಬೆಂಗಳೂರು,ಜೂನ್,3,2026 (www.justkannada.in):  ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದು ನಂತರ ಸಚಿವರಾಗಿ ಶಾಸಕರು ಪ್ರದಗ್ರಹಣ ಮಾಡಿದ್ದಾರೆ.

ಹೊಸ ಸಚಿವ ಸಂಪುಟದ ಸಚಿವರಾಗಿ ಎಂ.ಬಿ ಪಾಟೀಲ್, ರಾಮಲಿಂಗರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ , ಯು ಟಿ ಖಾದರ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಹಿಂದಿನ ಸಿದ್ದರಾಮಯ್ಯ ಅವಧಿಯಲ್ಲಿ ಯು.ಟಿ ಖಾದರ್ ಸ್ಪೀಕರ್ ಆಗಿ ಕೆಲಸ ನಿರ್ವಹಿಸಿದ್ದರು. ಈಗ ಸಚಿವ ಸ್ಥಾನ ಒಲಿದಿದೆ.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ,  ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳ ಸಿಎಂ ಸತೀಶನ್,  ಇನ್ಫೋಸಿಸ್ ನಾರಾಯಣಮೂರ್ತಿ,  ಸುಧಾಮೂರ್ತಿ ಅವರು ಸೇರಿ ಹಲವು ಉದ್ಯಮಿಗಳು ನಾಡಿನ ವಿವಿಧ ಮಠಾಧೀಶರು ಸೇರಿ ಹಲವರು  ಪಾಲ್ಗೊಂಡಿದ್ದರು.

Key words: U.T. Khader, Krishna Bhairegowda, Priyank Kharge, oath, as ministers