ಎನ್. ಟಿ.ಎಂ ಶಾಲೆ v/s ಸ್ಮಾರಕ ನಿರ್ಮಾಣ ವಿಚಾರ: ತಮ್ಮ ನಿಲುವು ಸ್ಪಷ್ಟಪಡಿಸದ ಸಚಿವ ಎಸ್ ಟಿ ಸೋಮಶೇಖರ್.

ಮೈಸೂರು,ಜುಲೈ,6,2021(www.justkannada.in): ನಗರದಲ್ಲಿ  ಎನ್ ಟಿಎಂ ಶಾಲೆ v/s ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹೋರಾಟ ನಡೆಯುತ್ತಿದ್ದರೂ ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಗೆ ಮಾಹಿತಿ ಕೊರತೆ ಇದೆಯೇ ಎನ್ನಲಾಗುತ್ತಿದೆ.jk

ಜಿಲ್ಲಾಧಿಕಾರಿ ಕಚೇರಿಯ ಕೂಗುಳತೆಯ ದೂರದಲ್ಲೇ ನಡೆಯುತ್ತಿರುವ ಸದ್ದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇಳುತ್ತಿಲ್ಲವೇ..? ಹೌದು ಶಾಲೆ v/s ಸ್ಮಾರಕ ನಿರ್ಮಾಣ ವಿಚಾರದಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಜಾರಿಕೆ ಉತ್ತರ ನೀಡಿದ್ದಾರೆ.

ಎನ್. ಟಿ.ಎಂ ಶಾಲೆ ಹೋರಾಟ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸದ ಸಚಿವ ಎಸ್ ಟಿ ಸೋಮಶೇಖರ್ ಶಾಲೆಯ ಹೋರಾಟದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.  ಈ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ. ಸಂಪೂರ್ಣ ಮಾಹಿತಿ ಇಲ್ಲದೆ ನಾನು ಯಾವುದನ್ನು ಮಾತನಾಡುವುದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.

ಶಾಲೆ ಉಳಿಯೋ ಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆಗೂ ಉತ್ತರಿಸದೆ  ಸಚಿವ ಎಸ್ ಟಿ ಸೋಮಶೇಖರ್ ಸಬೂಬು ಹೇಳಿದ್ದಾರೆ.

Key words: NTM School v / s Memorial Construction – Minister -S T Somashekhar- not clarify