Sunday, September 13, 2026

BDA Apartments

ನಟೋರಿಯಸ್ ರೌಡಿ ಬಚ್ಚಾಖಾನ್ ಬಂಧಿಸಿದ ಪೊಲೀಸರು BDA JK_Adv BDA Adv
Home Crime ನಟೋರಿಯಸ್ ರೌಡಿ ಬಚ್ಚಾಖಾನ್ ಬಂಧಿಸಿದ ಪೊಲೀಸರು

ನಟೋರಿಯಸ್ ರೌಡಿ ಬಚ್ಚಾಖಾನ್ ಬಂಧಿಸಿದ ಪೊಲೀಸರು

ಬೆಂಗಳೂರು, ಸೆಪ್ಟಂಬರ್ 4,2024 (www.justkannada.in): ಪೆರೋಲ್ ಮೇಲೆ ಹೊರಗಿದ್ದ ನಟೋರಿಯಸ್ ರೌಡಿ ಬಚ್ಚಾಖಾನ್ ನನ್ನು ಬೆಂಗಳೂರಿನಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ವಿಐಪಿ ಸೆಲ್‌ನಲ್ಲಿ ಇದ್ದ ಈತ ಇತ್ತೀಚೆಗೆ ಪೆರೋಲ್ ಪಡೆದು ಹೊರ ಬಂದಿದ್ದ. ಕೊಲೆ ಸಂಚು ಆರೋಪದಲ್ಲಿ ನಟೋರಿಯಸ್ ರೌಡಿ ಬಚ್ಚಾ ಖಾನ್ ಹಾಗೂ ಆತನ ಗ್ಯಾಂಗ್‌ ಅನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ  ಬಚ್ಚಾಖಾನ್ ಅನ್ನು ಬಳ್ಳಾರಿಯ ಜೈಲಿನಲ್ಲಿ ಇರಿಸಲಾಗಿತ್ತು ಆತ ಪೆರೋಲ್ ಪಡೆದು ಹೊರ ಬಂದು ಮತ್ತೆ ಹಳೇ ಚಾಳಿ ಮುಂದುವರೆಸಿದ್ದ. ಹುಬ್ಬಳ್ಳಿಯಲ್ಲಿ ಮತ್ತೊಬ್ಬರಿಗೆ ಈ ಬಚ್ಚಾಖಾನ್ ಹಾಗೂ ಆತನ ಗ್ಯಾಂಗ್ ಹತ್ಯೆ ಬೆದರಿಕೆ ಹಾಕಿತ್ತು.ಇದೀಗ ಕೊಲೆಗೆ ಸಂಚು ಆರೋಪದಡಿ ಬಚ್ಚಾಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯಲ್ಲಿ 2020ರಲ್ಲಿ ಫ್ರೂಟ್ ಇರ್ಫಾನ್ ಎಂಬುವವನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೌಡಿಗೆ ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಜೈಲು ಸೇರಿದ್ದ ಈತ ಪೆರೋಲ್ ಮೇಲೆ ಹೊರಗಿದ್ದ.

Key words: Notorious rowdy,  Bachchakhan, arrested , police