ಸಿದ್ಧರಾಮಯ್ಯ ಸಿಎಂ ಎಂದಿದ್ದ ಕಾಂಗ್ರೆಸ್ ನಾಯಕರಿಗೆ ನೋಟಿಸ್.

ನವದೆಹಲಿ,ಮೇ,17,2023(www.justkannada.in):  ರಾಜ್ಯ ಸಿಎಂ ಆಯ್ಕೆ ಕಗ್ಗಂಟು ಇನ್ನೂ ಮುಂದುವರೆದಿದ್ದು ಈಗಿರುವಾಗಲೇ  ಸಿದ್ಧರಾಮಯ್ಯ ಸಿಎಂ ಆಗುವುದು ಬಹುತೇಕ ಖಚಿತ ಎಂದು ಹೇಳಿಕೆ ನೀಡಿದ್ದ ಇಬ್ಬರು ನಾಯಕರಿಗೆ ಕಾಂಗ್ರೆಸ್ ನೋಟಿಸ್ ನೀಡಿದೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹಾಗೂ ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಗೆ ನೋಟಿಸ್ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಹೆಸರು ಫೈನಲ್ ಆಗಿದೆ ಎಂದು ಡಾ.ಪುಷ್ಪಾ ಅಮರನಾಥ್ ಹೇಳಿಕೆ ನೀಡಿದ್ದರು. ಮಾಧ್ಯಮಗಳಲ್ಲಿ ನಾಳೆಯೇ ಪ್ರಮಾಣವಚನ ಸ್ವೀಕಾರ ಸಮಾರಂಭ ಎಂದು ವರದಿಯಾಗಿತ್ತು.

ಆದರೆ ಡಿ.ಕೆ ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ಕಸರತ್ತು ಮುಂದುವರೆಸಿದ್ದು ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚೆ ನಡೆಸಿದರು. ಈ ನಡುವೆ ಸಿದ್ಧರಾಮಯ್ಯ ಸಿಎಂ ಎಂದಿದ್ದಕ್ಕೆ ಡಾ. ಪುಷ್ಪಅಮರನಾಥ್ ಮತ್ತು ಶಾಸಕ ಅಶೋಕ್ ಪಟ್ಟಣ್ ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತರಾಟೆ ತೆಗೆದುಕೊಂಡಿದ್ದು, ಇಬ್ಬರಿಗೂ ನೋಟಿಸ್ ನೀಡಲು ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

Key words: Notice -Congress -leaders – Siddaramaiah -CM.