ಬಜೆಟ್ ಮೇಲೆ ಸಂಪೂರ್ಣ ಚರ್ಚೆಯಾಗಿಲ್ಲ: ನಮ್ಮ ಹಲವು ಪ್ರಶ್ನೆಗಳಿಗೆ ಸಿಎಂ ಉತ್ತರಿಸಿಲ್ಲ- ಸಿದ್ಧರಾಮಯ್ಯ ಆರೋಪ….

ಬೆಂಗಳೂರು,ಮಾರ್ಚ್,24,2021(www.justkannada.in):  ಬಜೆಟ್ ಮೇಲೆ ಸಂಪೂರ್ಣ ಚರ್ಚೆಯಾಗದಿದ್ದರೂ ಸಿಎಂ ಬಿಎಸ್ ಯಡಿಯೂರಪ್ಪ ಸದನದಲ್ಲಿ ತರಾತುರಿಯಲ್ಲಿ ಉತ್ತರ ನೀಡಿದ್ದಾರೆ. ನಾವು ಎತ್ತಿದ ಹಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.jk

ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ‌ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬಜೆಟ್ ಮೇಲೆ ಚರ್ಚೆಯಾಗದಿದ್ದರೂ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ತರಾತುರಿಯಲ್ಲಿ ಉತ್ತರ ಓದಿದ್ದಾರೆ. ಅದು ಹೇಗಿತ್ತೆಂದರೆ, ಸಂತೆಯಲ್ಲಿ  ಮಾನ ಹೋಗುವ ವ್ಯಕ್ತಿಗಳು ಸೊಪ್ಪು ಸೆದೆಯಲ್ಲಿ ಮಾನ‌ಮುಚ್ಚಿಕೊಂಡಂತಿತ್ತು ಎಂದು ಲೇವಡಿ ಮಾಡಿದರು.

ಕಲಾಪದಲ್ಲಿ ನಾವು ಎತ್ತಿದ ಅನೇಕ ವಿಚಾರಕ್ಕೆ ಸರ್ಕಾರ ಉತ್ತರವನ್ನೇ ನೀಡಿಲ್ಲ. ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ಅದಕ್ಕೆ ಉತ್ತರ ನೀಡಿಲ್ಲ.  ರಾಜ್ಯದ ಬದ್ಧ ವೆಚ್ಚ ಶೇ.102 ತಲುಪಿದೆ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಈ ವರ್ಷ ಆದಾಯ ಕೊರತೆ 19 ಸಾವಿರ ಕೋಟಿಗಿಂತ ಹೆಚ್ಚಾಗಿದೆ ಎಂದು  ಕಿಡಿಕಾರಿದರು.

Former CM- Siddaramaiah- warns- implemented-anugraha
siddaramaih#profile..

ಈ ರಾಜ್ಯ ಇವರ ಕೈಯಲ್ಲಿದ್ದರೆ ಹಣಕಾಸು ಶಿಸ್ತು ತರಲು ಸಾಧ್ಯವೇ? ನಾನು ಹದಿಮೂರು ಬಜೆಟ್ ಮಂಡಿಸಿದ್ದು ಶಿಸ್ತು ಕಾಪಾಡಿದ್ದೆ ಎಂದು ರಾಜ್ಯ ಬಿಜೆಪಿ ಸರ್ಕಾರವನ್ನ ಸಿದ್ದರಾಮಯ್ಯ ಟೀಕಿಸಿದರು.

Key words: Not – complete –discussion-budget-former cm-Siddaramaiah