ನಾನಂತೂ ಬ್ರಾಹ್ಮಣ ವಿರೋಧಿಯಲ್ಲ: ಜಾತಿ ವಿಚಾರ ಬಂದಾಗ ಕಡಿಮೆ ಮಾತನಾಡಬೇಕು- ಜೆಡಿಎಸ್  ಶಾಸಕ ಡಿ.ಸಿ ತಮ್ಮಣ್ಣ.

kannada t-shirts

ಮಂಡ್ಯ,ಫೆಬ್ರವರಿ,7,2023(www.justkannada.in): ನಾನಂತೂ ಬ್ರಾಹ್ಮಣ ವಿರೋಧಿಯಲ್ಲ. ಜಾತಿ ವಿಚಾರ ಬಂದಾಗ ಮಾತನಾಡುವುದನ್ನ ನಾವು ಕಡಿಮೆ ಮಾಡಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ನಾನು ಈ ಬಗ್ಗೆ ಮನವಿ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ  ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್​ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಆರ್​ಎಸ್​ಎಸ್ ಹುನ್ನಾರ ನಡೆಸುತ್ತಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.  ಈ ಹೇಳಿಕೆಗೆ ಬಿಜೆಪಿ ಸೇರಿ ಬ್ರಾಹ್ಮಣ ಸಮುದಾಯ ಟೀಕೆ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿದ  ಶಾಸಕ ಡಿ.ಸಿ ತಮ್ಮಣ್ಣ, ಹೆಚ್.ಡಿ ಕುಮಾರಸ್ವಾಮಿಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನಂತು ಬ್ರಾಹ್ಮಣರ ವಿರೋಧಿಯಂತೂ ಅಲ್ವೇ ಅಲ್ಲಾ. ಬ್ರಾಹ್ಮಣರ ಸಂಸ್ಕೃತಿಯನ್ನ ಬಹಳ ಇಷ್ಟ ಪಡುವವನು ನಾನು. ಬ್ರಾಹ್ಮಣ ಅಂದರೆ ಒಂದು ಜಾತಿಗೆ ಸೀಮಿತ ಅಲ್ಲ, ಯಾರು ಬ್ರಾಹ್ಮಣತ್ವವನ್ನ ನಿಜವಾಗಿ ಪಾಲಿಸುತ್ತಾರೋ ಅವರು ಬ್ರಾಹ್ಮಣರು. ಜಾತಿ ವಿಚಾರ ಬಂದಾಗ ಮಾತನಾಡುವುದನ್ನ ನಾವು ಕಡಿಮೆ ಮಾಡಬೇಕು. ಈ ಬಗ್ಗೆ ಕುಮಾರಸ್ವಾಮಿಯವರಿಗೂ ನಾನು ಮನವಿ ಮಾಡುತ್ತೇನೆ ಎಂದರು.

Key words: not- anti-Brahmin-talk HD Kumaraswamy- JDS MLA- D.C Tammanna.

website developers in mysore