ನಾನು ವಿಷಾದ ವ್ಯಕ್ತಪಡಿಸುವ, ಅವಮಾನವಾಗುವಂತಹ ಹೇಳಿಕೆ ನೀಡಿಲ್ಲ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಫೆಬ್ರವರಿ,7,2023(www.justkannada.in): ಪ್ರಹ್ಲಾದ್ ಜೋಶಿ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ನಡೆಸುತ್ತಿದೆ ಎಂದು ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ,  ನಾನು ವಿಷಾದ ವ್ಯಕ್ತಪಡಿಸುವಂತ ಹೇಳಿಕೆ ನೀಡಿಲ್ಲ. ನಾನು ಅವಮಾನವಾಗುವಂತೆಹ ಹೇಳಿಕೆ ನೀಡಿಲ್ಲ ಬ್ರಾಹ್ಮಣರು ಸಿಎಂ ಆಗಬಾರದು ಎಂದು ಹೇಳಿಲ್ಲ ವಿರೋಧಿಗಳು ಮಾತನಾಡುತ್ತಾರೆ ಮಾತನಾಡಲಿ. ಎಲ್ಲವನ್ನೂ ಸಕರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಧಕ್ಕೆ ಬರಬಾರದು. ಶೃಂಗೇರಿ ದೇವಾಲಯದ ಮೇಲೆ ದಾಳಿ ಮಾಡಿದವರು  ಯಾರು..? ಶಿವಾಜಿ ಮೇಲೆ ದಾಳಿ ಮಾಡಿದವರು ಯಾರು..?  ಅಂಥಾ ಡಿಎನ್ ಎ ಬರಬಾರದು ಎಂದು ಹೇಳಿದ್ದೇನೆ. ಪೇಶ್ವೆಗಳ ಡಿಎನ್ ಎ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಪ್ರಹ್ಲಾದ್ ಜೋಶಿ ನನ್ನ ಕುಟುಂಬದ ಬಗ್ಗೆ ಟೀಕೆ ಮಾಡಿದರು. ಆದರೆ  ನಾನು ಟೀಕೆ ಮಾಡಿದರೇ ಅಪರಾದ ಅಂತಾರೆ ಏಕೆ. ನಾನು ಸುಮ್ಮ ಸುಮ್ಮನೇ ಮಾತನಾಡಲ್ಲ ಪಕ್ಕಾ ಮಾಹಿತಿ ಇದ್ದರೇ ಮಾತ್ರ ಮಾತನಾಡುತ್ತೇನೆ . ನಾನು ಬಿಜೆಪಿ ಜೊತೆ ಸರ್ಕಾರ ಮಾಡಿದ್ದೇನೆ. ಬಿಜೆಪಿಯಲ್ಲೂ ನನ್ನ ವೆಲ್ ವಿಷರ್ ಗಳಿದ್ದಾರೆ ಎಂದು ಹೆಚ್.ಡಿಕೆ ಹೇಳಿದರು.

Key words: Bramhana- regretful –shameful- statement-Former CM -HD Kumaraswamy.