ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಮಾಂಸಪ್ರಿಯರಿಗಾಗಿ ನಾನ್ ವೆಜ್ ಶಾಖೆ ಓಪನ್.

ಮೈಸೂರು,ಆಗಸ್ಟ್,27,2021(www.justkannada.in):  ಮೈಸೂರಿನ ಟಿ.ಕೆ ಲೇಔಟ್ ಬಡಾವಣೆಯ ಗಣೇಶ್ ಭಂಡಾರ್ ಸಮೀಪವಿರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಇದೀಗ  ಮಾಂಸಪ್ರಿಯರಿಗಾಗಿ ನಾನ್ ವೆಜ್ ಶಾಖೆಯನ್ನೂ  ಆರಂಭವಾಗಿದೆ.

ಹೋಟೆಲ್ ನ ಮಾಂಸಹಾರಿ ಶಾಖೆಯನ್ನ  ದೀಪ ಬೆಳಗುವ ಮೂಲಕ ಬೋಗಾದಿ ರಾಜಣ್ಣ ಉದ್ಘಾಟಿಸಿದರು. ಈ ವೇಳೆ ಎಕ್ಸಿಟಿಟ್ಯುವ್ ಚೆಫ್ ವಿಶ್ವನಾಥ್,  ಅವಿನಾಶ್ ರಾಜಣ್ಣ,ರಾಕೇಶ್, ವಿಶ್ವನಾಥ್, ಹೋಟೆಲ್ ಮಾಲೀಕರಾದ ಶಿವಮೂರ್ತಿ ಉಪಸ್ಥಿತರಿದ್ದರು.

ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ತಯಾರಿಸಿ  ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿರುವ ಸಸ್ಯಹಾರಿ  ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಇನ್ಮುಂದೆ ನಾನ್ ವೆಜ್ ನ ವಿವಿಧ ರೀತಿಯ ಆಹಾರ ಪದಾರ್ಥಗಳು ಲಭ್ಯವಿರಲಿವೆ.

Key words: Non Veg- Branch -Open – Meat Lovers – Chef the Cuisine – Mysore.