ಗೃಹ ಸಚಿವರ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್.

ಬೆಂಗಳೂರು,ಆಗಸ್ಟ್,27,2021(www.justkannada.in): ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಆ ವೇಳೆಯಲ್ಲಿ ಯುವತಿ ಹೋಗಬಾರದಿತ್ತು ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಪೂರ್ಣಿಮಾ ಶ್ರೀನಿವಾಸ್, ಗೃಹ ಸಚಿವರು ನೆಗೆಟಿವ್ ಆಗಿ ಆ ಹೇಳಿಕೆ ಕೊಟ್ಟಿದ್ದಲ್ಲ. ಮಹಿಳೆಯರ ಬಗ್ಗೆ ಕಾಳಜಿಯಿಂದ ಹೇಳಿಕೆ ಕೊಟ್ಟಿದ್ದಾರೆ. ಆ ಸಮಯದಲ್ಲಿ ಮಹಿಳೆಯರು ಅಲ್ಲಿಗೆ ಹೋಗಬಾರದು ಎನ್ನುವ ಹೇಳಿಕೆ ಬೇರೆ ಅರ್ಥದಲ್ಲಿ ಭಾವಿಸಬಾರದು. ರಾತ್ರಿ ಸೂಕ್ತ ಸಮಯ ಎಂದು ಕಾಮುಕರು ಭಾವಿಸುತ್ತಾರೆ. ಹೀಗಾಗಿ ರಾತ್ರಿ ಓಡಾಡಬೇಡಿ ಎಂದು ಗೃಹಸಚಿವರು ಹೇಳಿದ್ದಾರೆ ತಿಳಿಸಿದರು.

ನಮ್ಮ ಸರ್ಕಾರ, ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಕಿಡಿಗೇಡಿಗಳ ಬಂಧನವಾಗದಿರುವುದು ಸರ್ಕಾರದ ವೈಫಲ್ಯವೆಂದು ಹೇಳಲು ಆಗಲ್ಲ. ತಪ್ಪು ಮಾಡಿದವರು ಬುದ್ಧಿವಂತಿಕೆಯಿಂದ ತಲೆ ತಪ್ಪಿಸಿಕೊಂಡಿದ್ದಾರೆ. ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಶಾಸಕಿ ಪೂರ್ಣಿಮಾ ತಿಳಿಸಿದರು.

Key words: BJP MLA- Purnima Srinivas- defended- Statement – Home Minister