ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ವಿಚಾರ: ಶಾಸಕ ಲಕ್ಷ್ಮಣ್ ಸವದಿ ಬೇಸರ.

ಬೆಳಗಾವಿ,ಜನವರಿ,2,2024(www.justkannada.in): ರಾಮಜನ್ಮಭೂಮಿ ಅಯೋಧೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಬೇಸರ ಹೊರ ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಅಯೋಧ್ಯೆ ಮಂದಿರ ಆಗಲು  ಎಲ್.ಕೆ ಅಡ್ವಾಣಿಯೇ ಕಾರಣ ಆದರೆ ಅಡ್ವಾಣಿ ಬರಬಾರದು ಅಂದ್ರೆ  ಯಾವ ನೈತಿಕತೆ ಇದೆ. ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡದಿರೋದು ದೊಡ್ಡ ವಿಚಾರ ಅಲ್ಲ.  ರಾಮಮಂದಿರಕ್ಕೆ  ಹಣ ಸಂಗ್ರಹಿಸುವಾಗ ಎಲ್ಲರೂ ನೆನಪಿಗೆ ಬಂದ್ರು. ಆದರೆ ಮಂದಿರ ನಿರ್ಮಿಸಿದ ಮೇಲೆ ಯಾರೂ ನೆನಪಿಗೆ  ಬರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಮಂದಿರ ನಿರ್ಮಾಣಕ್ಕೆ ನಾನು 10 ಲಕ್ಷ ರೂ. ಕೊಟ್ಟಿದ್ದೇನೆ.  ಆರ್ ಎಸ್ ಎಸ್ ಮುಖಂಡರು ಬಂದು  ಪಡೆದುಕೊಂಡು ಹೋದರು. ಆದರೆ ಈಗ ಯಾವುದಕ್ಕೂ ಅಹ್ವಾನ ನೀಡಿಲ್ಲ ಎಂದು ಲಕ್ಷ್ಮಣ್ ಸವದಿ ಹೇಳಿದರು.

Key words: Non-invitation – Ram Mandir -inauguration – MLA -Laxman Savadi