ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ – ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ವಿಜಯಪುರ,ಅಕ್ಟೋಬರ್,23,2021(www.justkannada.in): ಜೆಡಿಎಸ್ ಮುಗಿಸಲು ಹಲವರು ಪ್ರಯತ್ನಿಸುತಿದ್ದಾರೆ. ಆದರೆ ಅಷ್ಟಯ ಸುಲಭವಾಗಿ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದುಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.

ವಿಜಯಪುರ ಸಿಂದಗಿಯಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಜೆಡಿಎಸ್ ಪಕ್ಷದ ಬೇರು ಗಟ್ಟಿಯಾಗಿದೆ. ಯಾರಿಂದಲೂ ಜೆಡಿಎಸ್ ಅಲುಗಾಡಿಸಲು ಸಾಧ್ಯವಿಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಎನ್ನುವುದಕ್ಕೆ ಬೆಲೆ ಇಲ್ಲ. ಕಾಂಗ್ರೆಸ್ ನವರೇ ಈ ಹಿಂದೆ ನನ್ನ ಮನೆಗೆ ಬಂದಿದ್ದರು ಎಂದು ಟಾಂಗ್ ನೀಡಿದರು.

ಈ ಹಿಂದೆ ಜಮೀರ್ ಅಹ್ಮದ್ ಖಾನ್ ಗೆಲ್ಲಿಸಿದ್ಧು ನಾನು. ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಪ್ರಚಾರ ಮಾಡಿದ್ದೆ.  ಆದರೆ ನಂತರ ಜಮೀರ್ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಹೋದ್ರು ಎಂದು ಹೆಚ್.ಡಿ ದೇವೇಗೌಡರು ನುಡಿದರು.

Key words: Nobody -can -finish –JDS-  Former Prime Minister-HD Deve Gowda