ಕಾಂಗ್ರೆಸ್, ಬಿಜೆಪಿ ಡಬಲ್ ಗೇಮ್​ನಿಂದ ಮುಸ್ಲಿಮರು ಅತಂತ್ರವಾಗಿದ್ದಾರೆ- ಜೆಡಿಎಸ್ ಎಂಎಲ್ ಸಿ ಬಿಎಂ ಫಾರೂಕ್ ವಾಗ್ದಾಳಿ.

ಬೆಂಗಳೂರು,ಅಕ್ಟೋಬರ್,23,2021(www.justkannada.in): ಕಾಂಗ್ರೆಸ್, ಬಿಜೆಪಿ ಡಬಲ್ ಗೇಮ್​ನಿಂದ ಮುಸ್ಲಿಮರು ಅತಂತ್ರವಾಗಿದ್ದಾರೆ ಎಂದು ಜೆಡಿಎಸ್ ಎಂಎಲ್ ಸಿ  ಬಿಎಂ ಫಾರೂಕ್ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಎಂ ಫಾರೂಕ್,  ಮುಸ್ಲಿಮರ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್, ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಮುಸ್ಲಿಮರನ್ನ ಎತ್ತಿಕಟ್ಟಿ ರಾಜಕೀಯ ಮಾಡುತ್ತಿದೆ. ಕೋಮು ಶಕ್ತಿಗಳನ್ನ ಮುಸ್ಲಿಮರ ವಿರುದ್ಧ ಬಿಜೆಪಿ ಎತ್ತಿ ಕಟ್ಟುತ್ತಿದೆ. ಬಿಜೆಪಿ, ಕಾಂಗ್ರೆಸ್ ನಡುವೆ ಯಾವುದೇ ರೀತಿ ವ್ಯತ್ಯಾಸ ಇಲ್ಲ ಎಂದು ಹೇಳಿದರು.

ಆರ್​ಎಸ್​​ಎಸ್​ ಬೆಳೆದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭ. ಆರ್​ಎಸ್​ಎಸ್​ ಇಲ್ಲ ಅಂದ್ರೆ ಕಾಂಗ್ರೆಸ್ ​ಗೆ ಬೆಲೆಯೇ ಇಲ್ಲ. ಆರ್​ಎಸ್​ಎಸ್​ ಗುಮ್ಮ ತೋರಿಸಿ ಕಾಂಗ್ರೆಸ್ ಮುಸ್ಲಿಮರ ಮತ ಪಡೆಯುತ್ತದೆ. ಕಾಂಗ್ರೆಸ್ ಕೂಡ ಆರ್​ಎಸ್​ಎಸ್ ​ಗೆ ಪರೋಕ್ಷ ಬೆಂಬಲ ಕೊಡುತ್ತಿದೆ ಎಂದು ಬಿಎಂ ಫಾರೂಕ್ ಆರೋಪಿಸಿದರು.

ರಾಜ್ಯಸಭೆ ಟಿಕೆಟ್ ಕೊಡಲು ಹೆಚ್ಡಿಕೆ ನನ್ನನ್ನ ಕರೆಸಿದ್ದರು. ಮುಂಬೈನಲ್ಲಿದ್ದ ನನ್ನನ್ನು ಫೋನ್ ಮಾಡಿ ಕರೆಸಿಕೊಂಡಿದ್ದರು. ಜಮೀರ್, ಇತರರು ನನಗೆ ದೋಖಾ ಮಾಡಿ ಹೋದರು ಅಂತ ಫಾರೂಕ್ ಕಿಡಿಕಾರಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಮುಸ್ಲಿಂ ಮುಖಂಡರ ಮೋಸದಿಂದ ಸೋಲು ಅನುಭವಿಸಿದ್ದೆವು. ನಾವು 30-35 ಕ್ಷೇತ್ರಗಳನ್ನು ಕಳೆದುಕೊಂಡೆವು. ಐಎಎಸ್ ಮತ್ತು ಕೆಲವು ನಿವೃತ್ತ ಅಧಿಕಾರಿಗಳ ಜೊತೆಗೂಡಿ ಸಿದ್ದರಾಮಯ್ಯ ಇದಕ್ಕೆ ಪಿತೂರಿ ನಡೆಸಿದ್ದರು. ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆದರು. ಇದರಿಂದಾಗಿ ಬಿಜೆಪಿಗೆ 105 ಸ್ಥಾನ ಗೆಲ್ಲಲು ಕಾರಣವಾಯಿತು ಎಂದು ಆರೋಪಿಸಿದರು.

Key words: Muslims – Congress -BJP -double game-JDS MLC- BM Farook