ಸದ್ಯಕ್ಕೆ ನಾವು ಮುಷ್ಕರಿಂದ ಹಿಂದೆ ಸರಿಯುವ ಮಾತಿಲ್ಲ- ಸಾರಿಗೆ ನೌಕರರ ಸಂಘದ ಮುಖಂಡ ಅನಂತ ಸುಬ್ಬರಾವ್.

ಬೆಂಗಳೂರು,ಮಾರ್ಚ್,16,2023(www.justkannada.in): ಸಾರಿಗೆ ನೌಕರರ ವೇತನ ಹೆಚ್ಚಳದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸದ್ಯಕ್ಕೆ ನಾವು ಮುಷ್ಕರಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಸಾರಿಗೆ ನೌಕರರ ಸಂಘದ ಮುಖಂಡ ಅನಂತ ಸುಬ್ಬರಾವ್ ತಿಳಿಸಿದ್ದಾರೆ.

ನಾಳೆ ಸಾರಿಗೆ ಮುಖಂಡರ ಸಮಾವೇಶ ನಡೆಯಲಿದೆ.  ಮಾರ್ಚ್ 21 ರಂದು ಸಾರಿಗೆ ನೌಕರರ ಮಷ್ಕರ ನಡೆಯಲಿದೆ.  ಸರ್ಕಾರದಿಂದ ಈವರೆಗೂ ಯಾವುದೇ ನೋಟಿಫಿಕೇಷನ್ ಬಂದಿಲ್ಲ. ಜನರಿಗೆ ತೊಂದರೆ ಮಾಡುವ ಉದ್ದೇಶ ಇಲ್ಲ. ವಜಾಗೊಂಡ ಸಿಬ್ಬಂದಿಯನ್ನ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಸಾರಿಗೆ ನೌಕರರ ವೇತನ ಹೆಚ್ಚಳದ ಆದೇಶಕ್ಕಾಗಿ ಕಾಯುತ್ತಿದ್ದೇನೆ ಸದ್ಯಕ್ಕೆ ನಾವು ಮುಷ್ಕರಿಂದ ಹಿಂದೆ ಸರಿಯುವ ಮಾತಿಲ್ಲ.

ವೇತನ ಹೆಚ್ಚಳ ಬಗ್ಗೆ ಸರ್ಕಾರದಿಂದ ನೋಟಿಫಿಕೇಷನ್ ಆಗಿಲ್ಲ. ಸಿಎಂ ನಮ್ಮನ್ನು ಕರೆದು ಮಾತನಾಡಿದ್ರೆ ಸಮಸ್ಯೆ ಇತ್ಯರ್ಥವಾಗುತ್ತದೆ.  ಇಲ್ಲದಿದ್ದರೇ ನಮ್ಮ ಹೋರಾಟ ಮುಂದುವರೆಯುತ್ತದೆ  ಎಂದು ಅನಂತ ಸುಬ್ಬರಾವ್ ಹೇಳಿದರು.

Key words: no -withdrawing – strike – Transport –Employees- Union- Ananta Subbarao