ನೇಣುಬಿಗಿದುಕೊಂಡು ನಗರಸಭೆ ಸದಸ್ಯ ಆತ್ಮಹತ್ಯೆಗೆ ಶರಣು.

ದಕ್ಷಿಣ ಕನ್ನಡ,ಮಾರ್ಚ್,16,2023(www.justkannada.in):  ನೇಣುಬಿಗಿದುಕೊಂಡು ನಗರಸಭೆ ಸದಸ್ಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ನಗರಸಭೆ ಸದಸ್ಯ ಶಿವರಾಮ ಸಫಲ್ಯ  ಆತ್ಮಹತ್ಯೆಗೆ ಶರಣಾದವರು. ಉರಮಾಲ್​ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ವಾರ್ಡ್ ನಂ.1ರ ಸದಸ್ಯರಾಗಿದ್ದ ಶಿವರಾಮ ಸಫಲ್ಯ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಂತರವಷ್ಟೇ ಆತ್ಮಹತ್ಯೆಯ ಹಿಂದಿನ ಕಾರಣ ತಿಳಿದು ಬರಬೇಕಿದೆ.

ಸ್ಥಳಕ್ಕೆ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ಪುತ್ತೂರು ಟೌನ್ ಪೊಲೀಸರೂ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

key words: Municipal -council -member -committed -suicide – puttur