ನಾಳೆ ಮೈಸೂರಿನ ಹಲವು ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಮೈಸೂರು, ಆಗಸ್ಟ್ 16, 2020 (www.justkannada.in): ನಾಳೆ ಮೈಸೂರಿನ ವಿವಿಧ ಬಡಾವಣೆ ಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಮೇಳಾಪುರ ಹಾಗೂ ರಮ್ಮನಹಳ್ಳಿಯಲ್ಲಿ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಹಿನ್ನೆಲೆ
ನೀರು ಸರಬರಾಜಿನಲ್ಲೂ ವ್ಯತ್ಯಯವಾಗಲಿದೆ.

ಎನ್ ಅರ್ ಕ್ಷೇತ್ರದ ವಿವಿಧ ಬಡಾವಣಿಗಳಲ್ಲಿ‌ ನೀರಿನ ಸರಬರಾಜಿನಲ್ಲಿ ವ್ಯತ್ಯಾಸವಾಗಲಿದೆ. ಎನ್ ಅರ್ ಮೊಹಲ್ಲಾ ,ಗಾಂಧಿ ನಗರ ಸುಭಾಷ್ ನಗರ, ಉದಯಗಿರಿ, ಕಲ್ಯಾಣಗಿರಿ, ಕೆಸರೆ , ರಾಜೇಂದ್ರನಗರ, ಯರಗನಹಳ್ಳಿ, ಗಿರಿದರ್ಶಿನಿ ಬಡಾವಣೆ, ಆಲನಹಳ್ಳಿ ಮುಂತಾದ ಬಡಾವಣೆ ಗಳಲ್ಲಿ‌ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.