ಭಾರತ್ ಜೋಡೋ ಯಾತ್ರೆಯಿಂದ ಜೆಡಿಎಸ್ ಗೆ ಯಾವುದೇ ಹಿನ್ನಡೆಯಾಗಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು, ಅಕ್ಟೋಬರ್,3,2022(www.justkannada.in):  ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಿಂದ ಜೆಡಿಎಸ್ ಗೆ ಯಾವುದೇ ಹಿನ್ನೆಡೆಯಾಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮೈಸೂರು ಭಾಗದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ರ್ಯಾಲಿ ನಡೆಸುತ್ತಿದ್ದಾರೆ.  ಅವರ ಕುಟುಂಬದ ಎಲ್ಲ ಸದಸ್ಯರು ಬಂದರೂ ಜೆಡಿಎಸ್ ಗೆ ಹಿನ್ನಡೆಯಾಗಲ್ಲ ಕರ್ನಾಟಕದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದರು.hd-deve-gowda-decision-contest-rajya-sabha-former-cm-hd-kumaraswamy

ಇವರು ಪಾದಯಾತ್ರೆಯಿಂದ ಜನರಿಗೆ ಏನು ಸಂದೇಶ ಕೊಡುತ್ತಿದ್ದಾರೆ. ಮೊದಲು  ಭಾರತ್ ಜೋಡೋ ಯಾತ್ರೆ ಮುಗಿಯಲಿ.  ನಮ್ಮ ಪಂಚರತ್ನ ಯಾತ್ರೆ ಏನು ಎಂದು ತೋರಿಸುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

Key words: no -setback- JDS – Bharat Jodo Yatra- Former CM- HD Kumaraswamy.