ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಗಂಡಸರಿಲ್ವಾ..? ಕಾಂಗ್ರೆಸ್ ಶಾಸಕ ವಾಗ್ದಾಳಿ.

ಮಂಡ್ಯ,ಫೆಬ್ರವರಿ,8,2024(www.justkannada.in):  ಈ ಬಾರಿಯೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ  ಸ್ಪರ್ಧೆ ಬಗ್ಗೆ ಚರ್ಚೆಯಾಗುತ್ತಿದ್ದು ಈ ಕುರಿತು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಗಂಡಸರಿಲ್ವಾ. ?   ಲೀಡರ್ ಮಕ್ಕಳೇ ಇಲ್ಲಿ ಚುನಾವಣೆಗೆ ನಿಲ್ಲಬೇಕಾ? ಎಂದು ವಾಗ್ದಾಳಿ ನಡೆಸಿದರು.

ಈ ಕುರಿತು ಮಾತನಾಡಿದ ಶಾಸಕ ಕದಲೂರು ಉದಯ್,  ಮಂಡ್ಯ, ಮದ್ದೂರಿನಲ್ಲಿ ಗಂಡಸರು ಇಲ್ವಾ? ಬೇರೆ ಜಿಲ್ಲೆಯವರು ಯಾಕೆ ಬರಬೇಕು? ಜಿಲ್ಲೆಯ ಜೆಡಿಎಸ್​​ನಲ್ಲಿ (JDS) ಸಮರ್ಥರಿಲ್ವಾ. ಅವರ ಕುಟುಂಬದವರೇ ಜಿಲ್ಲೆಗೆ ಬರಬೇಕಾ ಯಾರು ಬಂದರೂ ಎದುರಿಸಲು ನಮ್ಮ ಕಾಂಗ್ರೆಸ್​ನಲ್ಲಿ ಸಿದ್ಧರಿದ್ದೇವೆ ಎಂದರು.

ಜನರ ಸೇವೆ ಮಾಡುವವರು ಕ್ಷೇತ್ರದಲ್ಲಿ ನಿರಂತರವಾಗಿ ಇರಬೇಕು. ಐದು ವರ್ಷದಿಂದ ನಿಖಿಲ್ ಕುಮಾರಸ್ವಾಮಿ ಎಲ್ಲಿ ಹೋಗಿದ್ರು?  ಚುನಾವಣೆ ಬಂದಾಗ ಬರೋಕೆ ಜನ ದಡ್ಡರಲ್ಲ ಎಂದು ಹರಿಹಾಯ್ದರು.

Key words: No men – contest – JDS -in –Mandya- Congress- MLA