ನಾರಾಯಣಗೌಡರಿಗೆ ಕಾಂಗ್ರೆಸ್ ಸೇರಲು ಆಸಕ್ತಿ ಇದೆ- ಸಚಿವ ಚಲುವರಾಯಸ್ವಾಮಿ.

ಮಂಡ್ಯ,ಫೆಬ್ರವರಿ,8,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿರುವ ಹಿನ್ನೆಲೆ ಮಾಜಿ ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರಲಿದ್ದಾರೆಂಬ ಸುದ್ದಿ ಹರಡಿದ್ದು ಈ ಕುರಿತು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಚಲುವರಾಯಸ್ವಾಮಿ,  ನಾರಾಯಣಗೌಡರಿಗೆ ಕಾಂಗ್ರೆಸ್ ಸೇರಲು ಆಸಕ್ತಿ ಇದೆ. ನಾರಾಯಣಗೌಡರಿಗೆ ಕಾಂಗ್ರೆಸ್ ಸೇರಲು ಯಾವುದೇ ಕಂಡಿಷನ್ ಹಾಕಿಲ್ಲ. ಬಿಜೆಪಿಯಲ್ಲಿ ನಾರಾಯಣಗೌಡರಿಗೆ ಪ್ರಾಮುಖ್ಯತೆ ಇಲ್ಲ .ಜೆಡಿಎಸ್ ವಾತಾವರಣ ಸರಿಯಿಲ್ಲ ಎಂದು ಬಿಜೆಪಿಗೆ ಹೋದ್ರು. ಈಗ ಬಿಜೆಪಿ- ಜೆಡಿಎಸ್  ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಿರುವಾಗ ನಾರಾಯಣಗೌಡ ಅವರು ಹೇಗೆ ಬಿಜೆಪಿಯಲ್ಲಿ ಇರ್ತಾರೆ ಎಂದು ಪ್ರಶ್ನಿಸಿದರು.

Key words: Narayana Gowda – interested – joining- Congress – Minister -Chaluvarayaswamy.