ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಉತ್ಪಾದನೆ ಹೆಚ್ಚಿಸಿ ವಿದ್ಯುತ್ ಸರಬರಾಜು- ಸಚಿವ ಸುನೀಲ್ ಕುಮಾರ್.

ಬೆಂಗಳೂರು,ಅಕ್ಟೋಬರ್,22,2022(www.justkannada.in):  ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ.  ದೀಪಾವಳಿಗೂ ಲೋಡ್ ಶೆಡ್ಡಿಂಗ್ ಆಗಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುನೀಲ್ ಕುಮಾರ್,  ಬೇಸಿಗೆಯಲ್ಲಿ ಗ್ರಾಹಕರಿಗೆ ಯಾವುದೇ ಸಮಸ್ಯೆಗಳು ಆಗಲ್ಲ. ಉತ್ಪಾದನೆ ಹೆಚ್ಚಿಸಿ ವಿದ್ಯುತ್ ಸರಬರಾಜು ಮಾಡುತ್ತೇವೆ. ರಾಜ್ಯದ 14,800 ಮೆ.ವ್ಯಾ ವಿದ್ಯುತ್ ನಿರ್ವಹಣೆ ಮಾಡಿದ್ದೇವೆ ಎಂದರು.

ವರ್ಷದಲ್ಲಿ ಒಮ್ಮೆ ವಿದ್ಯುತ್ ದರ ಏರಿಕೆ ಮಾಡಲು ಸಿಎಂ ಗೆ ಮನವಿ ನೀಡಲಾಗಿದೆ. ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸಬಾರದು ಎಂದು ಕೆಆರ್​ಸಿಗೆ ವಿನಂತಿಸಲಾಗಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

Key words: No- load shedding – Dipavali- Increase- production – electricity – Minister- Sunil Kumar.