Sunday, August 23, 2026

BDA Apartments

Home Front Page ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಆದ್ರೆ ಈಗ ಅವರೇ ಆ ರೀತಿ ದಾರಿ ಮಾಡಿಕೊಂಡಿದ್ದಾರೆ-...

ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಆದ್ರೆ ಈಗ ಅವರೇ ಆ ರೀತಿ ದಾರಿ ಮಾಡಿಕೊಂಡಿದ್ದಾರೆ- ಶಾಸಕ ಮುನಿರತ್ನ.

ಬೆಂಗಳೂರು,ಅಕ್ಟೋಬರ್,19,2023(www.justkannada.in): ಆಪರೇಷನ್ ಕಮಲದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಮುನಿರತ್ನ, ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಆದ್ರೆ ಈಗ ಅವರೇ ಆ ರೀತಿ ದಾರಿ ಮಾಡಿಕೊಂಡಿದ್ದಾರೆ ಎಂದರು.

ಇಂದು ಮಾತನಾಡಿದ ಶಾಸಕ ಮುನಿರತ್ನ,  ಕಾಂಗ್ರೆಸ್ ನಾಯಕರೇ. ನೆಮ್ಮದಿಯಾಗಿ ಆಡಳಿತ ಮಾಡಿ, ಜನರಿಗೆ ಸಹಾಯ ಮಾಡಿ. ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಸಿಕೊಂಡು ಹೋಗಿ. ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಕೈ ಹಾಕಬೇಕು ಅಂತಾ ಹೊರಟರೆ ಮುಂದಿನ ದಿನಗಳಲ್ಲಿ ಆ ಮಾತು ಸತ್ಯ ಆಗುತ್ತದೆ. 17+3 ಮಾಡೋದು ಕಷ್ಟವಿಲ್ಲ. ನಮಗೆ. ದೇವಾನು ದೇವತೆಗಳು ತಥಾಸ್ತು ಅಂದರೆ ನಾವಂತೂ ಸುಮ್ಮನೆ ಇರುವುದಿಲ್ಲ ಎಂದು ಟಾಂಗ್ ನೀಡಿದರು.

ತಮ್ಮ ಕ್ಷೇತ್ರದ ಅನುದಾನ ವಾಪಸ್ ಪಡೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ, ನಮ್ಮ ಕ್ಷೇತ್ರದ ಹಣ ಬಿಡುವ ಪ್ರಶ್ನೆಯೇ ಇಲ್ಲ. ಡಿಸಿಎಂ ಹೇಳಿರುವ ಪ್ರಕಾರ ಅನುದಾನದ ಪಟ್ಟಿ ಕಳುಹಿಸಿ ಕೊಟ್ಟಿದ್ದೇನೆ. ಅವರು ಏನು ಮಾಡುತ್ತರೋ ಗೊತ್ತಿಲ್ಲ. ಇದು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಆಗಿರುವ ಹಣ. ಹಣ ಬರುವ ವಿಶ್ವಾಸ ಇದೆ, ಕಾಯುತ್ತೇನೆ ಎಂದು ತಿಳಿಸಿದರು.

Key words: no intention –fall-down – government – MLA -Muniratna.