ಜನರಿಗೆ ತೊಂದರೆ ಕೊಡುವ ಉದ್ಧೇಶ ನಮಗಿಲ್ಲ: ನಾಳೆ ಸೂಕ್ತ ನಿರ್ಧಾರ- ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಜನವರಿ,20,2022(www.justkannada.in): ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವುದರಿಂದಜಾರಿ ಮಾಡಲಾಗಿರುವ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂಗೆ  ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇದನ್ನ ಮುಂದವರಿಸಬೇಕೇ ಬೇಡವೇ ಎಂಬುದು ನಾಳೆ ನಿರ್ಧಾರವಾಗಲಿದೆ.

ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,  ಜನರ ಆರೋಗ್ಯ ದೃಷ್ಠಿಯಿಂದ ನಾಳೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಜನರ ಭಾವನೆ ವಿರೋಧಿಸುವ ಉದ್ದೇಶವಿಲ್ಲ.  ಅನಿವಾರ್ಯ ಪರಿಸ್ಥಿತಿಯಿಂದ ಕೆಲವು ಕ್ರಮಗಳನ್ನ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ ಎಂದರು.

ಬೆಂಗಳೂರಿಗೆ ಇನ್ನಷ್ಟು ಟಫ್ ರೂಲ್ಸ್ ಬಗ್ಗೆ ನಾಳೆ ನಿರ್ಧಾರ ಮಾಡುತ್ತೇವೆ. ಕಠಿಣ ಕ್ರಮಗಳಿಂದ ಏನೆಲ್ಲಾ ಪರಿಹಾರ ಆಗಿದೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: no intention – disturbing- people- Minister -Dr. K. Sudhakar.