ದೇಶದಲ್ಲಿ ಒಂದೇ ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ಕೋವಿಡ್  ಪ್ರಕರಣಗಳು ದೃಢ.

ನವದೆಹಲಿ,ಜನವರಿ,20,2022(www.justkannada.in):  ದೇಶದಲ್ಲಿ ಒಂದೇ ದಿನದಲ್ಲಿ ಹೊಸದಾಗಿ 3 ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ದೇಶದಲ್ಲಿ ಕಳೇದ 24 ಗಂಟೆಗಳಲ್ಲಿ  3,17, 532 ಕೊರೊನಾ ಕೇಸ್​ಗಳು ಪತ್ತೆಯಾಗಿದೆ.  ಇದೇ ಅವಧಿಯಲ್ಲಿ ಕೊರೋನಾಗೆ 491 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 38,218,773ಕ್ಕೆ  ಏರಿಕೆಯಾಗಿದೆ. ದಿನದ ಪಾಸಿಟಿವಿಟಿ ರೇಟ್​ 16.41 ಆಗಿದೆ. ಕೊರೊನಾ ಸಕ್ರಿಯ ಪ್ರಕರಣಗಳು 19,24,051 ಇವೆ.

ಇನ್ನೊಂದೆಡೆ ದೇಶದಲ್ಲಿ  9,287 ಮಂದಿಗೆ ಒಮಿಕ್ರಾನ್ ಸೋಂಕು ಇದೆ. ಇನ್ನು ವಯಸ್ಕರಿಗೆ 159 ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. 15-18 ವಯಸ್ಸಿನವರಿಗೂ ಕೊರೊನಾ ಲಸಿಕೀಕರಣ ನಡೆಯುತ್ತಿದ್ದು, ಆಯ್ದ ವರ್ಗಗಳಿಗೆ ಬೂಸ್ಟರ್ ಡೋಸ್ ಕೂಡ ನೀಡಲಾಗುತ್ತಿದೆ.

Key words: more than 3 lakh -cases –Covid- single day.