Sunday, August 23, 2026

BDA Apartments

Home Front Page ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ತಾರತಮ್ಯ ಇಲ್ಲ: ಶ್ವೇತಪತ್ರ ಹೊರಡಿಸಿ- ಕೇಂದ್ರ ಸಚಿವ ವಿ.ಸೋಮಣ್ಣ ಸವಾಲು

ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ತಾರತಮ್ಯ ಇಲ್ಲ: ಶ್ವೇತಪತ್ರ ಹೊರಡಿಸಿ- ಕೇಂದ್ರ ಸಚಿವ ವಿ.ಸೋಮಣ್ಣ ಸವಾಲು

ಬೆಂಗಳೂರು,ಅಕ್ಟೋಬರ್,15,2024 (www.justkannada.in): ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ತಾರತಮ್ಯ ಆಗಿಲ್ಲ. ಬೇಕಿದ್ದರೇ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ರೈಲ್ವೆ ಇಲಾಖೆಯ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. 2027ರ ವೇಳೆಗೆ ಎಲ್ಲಾ ಯೋಜನೆಗಳನ್ನ ಪೂರ್ಣಗೊಳಿಸುತ್ತೇವೆ.  ರಸ್ತೆ ಮೂಲಕ ಸೌಕರ್ಯಗಳಿಗೆ ಅನುದಾನ ನೀಡಿದೆ.  ಸ್ವಚ್ಚ ಭಾರತ್,  ಜಲ ಜೀವನ್ ಯೋಜನೆಗೆ ಕೇಂದ್ರದಿಂದ ಅನುದಾನ ನೀಡಲಾಗಿದೆ ಎಂದರು.

ಕೇಸ್ ವಾಪಸ್ ಕುರಿತು ಪ್ರತಿಕ್ರಿಯಿಸಿದ ವಿ.ಸೋಮಣ್ಣ,  ನನ್ನ ವೈಯಕ್ತಿಕ ಕೇಸ್ ಯಾವುದು ಇಲ್ಲ ಕಾರ್ಯಕರ್ತರ ಜೊತೆಗಿನ ಕೇಸ್ ಗಳಿವೆ . ಬಿಜೆಪಿ ಅವಧಿಯಲ್ಲಿ 4ರಿಂದ 5 ಕೇಸ್ ವಾಪಸ್ ಗೆ ಸಿದ್ದತೆ ಮಾಡಲಾಗಿತ್ತು.  ಈಗ ಆ ಕೇಸ್ ವಾಪಸ್ ಪಡೆದಿದ್ದಾರೆ ಎಂದರು.

Key words: No, injustice, center, grants, Union Minister, V. Somanna